Namma Haveri 24X7 News

Bureau Report

ಸ್ವಂತ ಮನೆ ಕನಸ್ಸು ಕಾಣುತ್ತಿರುವವರಿಗೆ ಶುಭ ಸುದ್ದಿ – ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೋಂದಣಿ ಆರಂಭ – ಅರ್ಹತೆ ಹಾಗೂ ಅರ್ಜಿ ಸಲ್ಲಿಕೆಯ ವಿವರ

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) 2.0 ಮೋದಿ ನೇತ್ರತ್ವದ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದು. ಈ ಯೋಜನೆಯಡಿ ಸರ್ಕಾರವು ಈಗ ಹೆಚ್ಚುವರಿ 3 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು. ಇದಕ್ಕಾಗಿ ಈ ಆರ್ಥಿಕ ವರ್ಷದಲ್ಲಿ 10 ಲಕ್ಷ ಕೋಟಿ ರೂ.ಮೀಸಲು ಇಡಲಾಗಿದೆ. ಮಾಸಿಕ 15,000 ರೂ. ಆದಾಯ ಇರುವವರೂ ಯೋಜನೆಗೆ ಅರ್ಹರಾಗಿದ್ದು, 90 ದಿನಗಳಲ್ಲಿ ಮನೆ ನೀಡುವ ಉದ್ದೇಶ ಹೊಂದಿದೆ.
ಅರ್ಹತೆ

  • ಈ ಮೊದಲು, ಮಾಸಿಕ ಆದಾಯ 10,000 ರೂ.ವರೆಗಿನ ಜನರು ಈ ಯೋಜನೆಗೆ ಅರ್ಹತೆ ಹೊಂದಿದ್ದರು.. ಈಗ ತಿಂಗಳ ಆದಾಯದ ಮಿತಿಯನ್ನು 15,000 ರೂ.ಗೆ ಹೆಚ್ಚಿಸಲಾಗಿದೆ.
  • ಈ ಹಿಂದೆ ಎರಡು ಕೋಣೆಗಳ ಕಚ್ಚೆ ಮನೆ, ಫ್ರಿಜ್ ಅಥವಾ ದ್ವಿಚಕ್ರ ವಾಹನ ಹೊಂದಿರುವವರು ಈ ಯೋಜನೆಗೆ ಅರ್ಹರಾಗಿರಲಿಲ್ಲ. ಆದರೆ ಈಗ ಈ ಹೊಸ ಯೋಜನೆಯಲ್ಲಿ ಈ ಷರತ್ತುಗಳನ್ನು ಸಡಿಲಿಸಲಾಗಿದೆ.
  • ಅರ್ಹ ವ್ಯಕ್ತಿಗಳನ್ನು ಗ್ರಾಮ ಮಟ್ಟದಲ್ಲಿ ಬಹಿರಂಗ ಸಭೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
  • ಅರ್ಹ ವ್ಯಕ್ತಿಗಳಿಗೆ ಕೇವಲ 90 ದಿನಗಳಲ್ಲಿ ಅವರ ಮನೆಗಳನ್ನು ಒದಗಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.

ನಾಲ್ಕು ವಿಭಾಗ

ಈ ಯೋಜನೆಯ ಪ್ರಯೋಜನಗಳನ್ನು ಎಲ್ಲಾ ನಾಗರಿಕರಿಗೆ ವಿಸ್ತರಿಸಲು, ಸರ್ಕಾರವು ಇದನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಿದೆ. ಅವುಗಳು ಕೆಳಕಂಡಂತಿವೆ: ಆರ್ಥಿಕವಾಗಿ ದುರ್ಬಲ ವಿಭಾಗ (EWS): ಇದು ಅತ್ಯಂತ ಕಡಿಮೆ ಆದಾಯದ ವರ್ಗವಾಗಿದೆ. ಈ ವರ್ಗಕ್ಕೆ ಸೇರುವ ಕುಟುಂಬಗಳು ವಸತಿ ಯೋಜನೆಯಡಿಯಲ್ಲಿ ಹೆಚ್ಚಿನ ಸಹಾಯವನ್ನು ಪಡೆಯುತ್ತವೆ.

ಕಡಿಮೆ ಆದಾಯದ ಗುಂಪು (LIG): ಈ ವರ್ಗದಲ್ಲಿ ಬೀಳುವ ಕುಟುಂಬಗಳ ಆದಾಯವು EWS ವರ್ಗಕ್ಕಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಅವರಿಗೂ ವಸತಿ ಯೋಜನೆಯಡಿ ಸಾಕಷ್ಟು ನೆರವು ಸಿಗುತ್ತದೆ.

ಮಧ್ಯಮ ಆದಾಯ ಗುಂಪು- 1 (MIG-I): ಈ ವರ್ಗದಲ್ಲಿ ಬೀಳುವ ಕುಟುಂಬಗಳ ಆದಾಯವು LIG ವರ್ಗಕ್ಕಿಂತ ಹೆಚ್ಚಾಗಿರುತ್ತದೆ.

ಮಧ್ಯಮ ಆದಾಯ ಗುಂಪು-2 (MIG-II): ಇದು ಅತ್ಯಧಿಕ ಆದಾಯ ವರ್ಗವಾಗಿದೆ. ಇತರ ವರ್ಗಗಳಿಗೆ ಹೋಲಿಸಿದರೆ ಈ ವರ್ಗದಲ್ಲಿ ಬೀಳುವ ಕುಟುಂಬಗಳು ಕಡಿಮೆ ಸಹಾಯವನ್ನು ಪಡೆಯುತ್ತವೆ.

ಸರ್ಕಾರ ಶೀಘ್ರದಲ್ಲೇ ಸಮೀಕ್ಷೆ ಪ್ರಾರಂಭಿಸಲಿದ್ದು, ಆರ್ಹ ಫಲಾನುಭವಿಗಳನ್ನು ಗುರುತಿಸಲಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ.

News Updates

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಡ್ಯಾಪ್ಕೋ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಆರ್ ಟಿ ಇ ಎಸ್ ಕಾಲೇಜ ಪ್ರಥಮ ವಾದರೆ, ಮಹಿಳಾ ವಿಭಾಗದಲ್ಲಿ ರಾಣೇಬೆನ್ನೂರ್ ನ ಆರ್. ಆರ್ ಕಾಲೇಜು ಜಿಲ್ಲೆ ಗೆ ಪ್ರಥಮ.

News Updates

ಆರ್. ಎಸ್.ರಾಮನಗೌಡ್ರ ಸಾರಥ್ಯದಲ್ಲಿ.

ನಮ್ಮ ಹಾವೇರಿ 24X7

haveriexpress78@gmail.com
Contact: 7892724924