Namma Haveri 24X7 News

Bureau Report

ರಾಜ್ಯ ಬಜೆಟ್ಟಿನಲ್ಲಿ ಹಾವೇರಿ ಜಿಲ್ಲೆಗೆ ಕೊಟ್ಟಿದ್ದಷ್ಟು..!?

ಹಾವೇರಿ : ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿರುವ 2025- 26 ನೇ ಸಾಲಿನ ಬಜೆಟ್ ನಲ್ಲಿ ಆರು ಶಾಸಕರನ್ನು ಹೊಂದಿರುವ ಹಾವೇರಿ ಜಿಲ್ಲೆಗೆ ಕೊಟ್ಟ ಕೊಡುಗೆ ಏನು? ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.

ಪ್ರಾದೇಶಿಕವಾರು, ಜನಸಂಖ್ಯೆವಾರು ಆಧರಿಸಿ ರಾಜ್ಯ ಬಜೆಟ್ ನಲ್ಲಿ ಅವಕಾಶ ಕಲ್ಪಿಸಬೇಕಿತ್ತು ಆದರೇ ತಾರತಮ್ಯ ಮಾಡಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗುತ್ತಿದೆ.
ಹಾವೇರಿ ಜಿಲ್ಲೆಯಲ್ಲಿ ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಒಬ್ಬನೇ ಒಬ್ಬ ವ್ಯಕ್ತಿ ಜಯಗಳಿಸಿರಲಿಲ್ಲ. ಆದರೆ ಈ ಅವಧಿಯಲ್ಲಿ ಅವರ ಆಶ್ವಾಸನೆಗಳು ರಾಜ್ಯದಲ್ಲಿ ಜನರನ್ನು ಮರಳು ಮಾಡುವಲ್ಲಿ ಜಯಶಾಲಿಯಾಗಿವೆ ಅನ್ನುತ್ತಾರೆ ಜಿಲ್ಲೆಯ ಜನತೆ.

ಹಾವೇರಿ ಜಿಲ್ಲೆಯಲ್ಲಿ ಬಸವರಾಜ್ ಬೊಮ್ಮಾಯಿ ಹೊರತುಪಡಿಸಿದರೆ ಒಮ್ಮೆ ಆಯ್ಕೆಯಾದ ವ್ಯಕ್ತಿ ಮತ್ತೊಮ್ಮೆ ಜಯಗಳಿಸಿದ್ದು ಇತಿಹಾಸದಲ್ಲಿ ಇಲ್ಲ. ಹೀಗಿರುವಾಗ ಇಲ್ಲಿ ಎಲ್ಲಾ ಶಾಸಕರು ಚುನಾವಣೆಯ ಸಮಯದಲ್ಲಿ ಕೊಟ್ಟಂತಹ ಆಶ್ವಾಸನೆಗಳನ್ನು ಈಡೇರಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಚಿಪ್ಪೇ ಗತಿ ಅನ್ನುತ್ತಾರೆ ಹಾವೇರಿಯ ಜನತೆ.

ಇತ್ತೀಚಿಗೆ 2025- 26ನೇ ರಾಜ್ಯ ಬಜೆಟಿನಲ್ಲಿ ಹಾವೇರಿ ಜಿಲ್ಲೆಗೆ
* ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಒಬಿಸಿ ಹಾಸ್ಟೆಲ್ ಪಿಯು ಕಾಲೇಜನ್ನಾಗಿ ಉನ್ನತಿಕರಣ.

* ಮೆಟ್ರಿಕ್ ನಂತರದ ವಸತಿ ನಿಲಯ ನಿರ್ಮಾಣ

* ರಾಣೆಬೆನ್ನೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್
ಇಷ್ಟನ್ನು ಬಿಟ್ಟರೆ ಯಾವ ಕೊಡುಗೆಯೂ ಇಲ್ಲ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಜಿಲ್ಲೆಯ ಶಾಸಕರು ವಿಫಲರಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.
ಉಪಸಭಾಪತಿಗಳ ತವರು ಜಿಲ್ಲೆ ಹಾವೇರಿ ಹಾವೇರಿ ತಾಲೂಕಿನಲ್ಲಿ ಶಿಕ್ಷಣ,ಉದ್ಯೋಗ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಶೂನ್ಯ. ಕಾಣದೆಹದಿಗೆಟ್ಟ ಹಳ್ಳಿಯ ರಸ್ತೆಗಳು ಅಭಿವೃದ್ಧಿ ಕಾಣದೆ ಇರುವುದು ತಾಲೂಕಿನ ಶಾಸಕರು ಆಟಕ್ಕುoಟ್ಟು ಲೆಕ್ಕಕ್ಕಿಲ್ಲದಂತಾಗಿದೆ ಎಂಬ ಗಂಭೀರ ಚರ್ಚೆ ಸಾರ್ವಜನಿಕರ ವಲಯದಲ್ಲಿ ಆಗುತ್ತಿದೆ.

ಇನ್ನೂ ರಾಣೆಬೆನ್ನೂರು ಶಾಸಕರಾದ ಪ್ರಕಾಶ್ ಕೋಳಿವಾಡ್ ಮಾಜಿ ಸಭಾಪತಿಗಳಾದ ಕೆ.ಬಿ. ಕೋಳಿವಾಡರ ಮಗ ಇವರು ತಾಲೂಕಿನಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ ಕ್ಕೆ ಹೆಚ್ಚು ಒತ್ತು ಕೊಟ್ಟು ಚುನಾವಣಾ ಸಮಯದಲ್ಲಿ ಪ್ರಚಾರ ಕೈಗೊಂಡವರು ಆದರೆ ಇಂದು ರಾಜ್ಯ ಬಜೆಟನಲ್ಲಿ ಇನ್ನೂ ಹೆಚ್ಚು ಕಂಪನಿಗಳನ್ನ ತಾಲೂಕಿಗೆ ತರಬಹುದಿತ್ತು ಎಂಬ ಮಾತು ಕೇಳಿ ಬರುತ್ತಿದೆ.
ತಾಲೂಕಿನ ಅತಿ ಹೆಚ್ಚು ವಿದ್ಯಾವಂತರು ಉದ್ಯೋಗ ಅರಿಸಿಕೊಂಡು ಬೇರೆ ಕಡೆ ವಲಸೆ ಹೋಗುತ್ತಿದ್ದಾರೆ. ವಿದ್ಯಾವಂತ ನಿರುದ್ಯೋಗಿ ಯುವಕರ ಆಸೆಗೆ ತಣ್ಣೀರೇರಿಸಿದ್ದಾರೆ ಎಂಬ ಗಂಭೀರ ಆರೋಪ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಾಣೆಬೆನ್ನೂರು ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಕೇವಲ ಉದ್ಘಾಟನೆಗೆ ಮಾತ್ರ ಸೀಮಿತಗೊಂಡಿದ್ದು ಅಭಿವೃದ್ಧಿ ಕಾರ್ಯಗಳನ್ನು ನಡೆಯುತ್ತಿಲ್ಲ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಹೀಗೆ ಎಲ್ಲಾ ತಾಲೂಕಿನ ಕಥೆ ವ್ಯಥೆ “ಬಂದಾಗ ಬಾಚಿಕೊಳ್ಳೋಣ ಮುಂದೆ ಬರುತ್ತೇವೆಯೋ ಇಲ್ಲವೋ ಗೊತ್ತಿಲ್ಲ ” ಜನಪರ ಕಾಳಜಿ, ಸ್ವಇಚ್ಚಾ ಶಕ್ತಿ ಕೊರತೆ,ಕೆಲಸ ಮಾಡುವ ಹುಮ್ಮಸ್ಸು ಈ ಸರಕಾರದ ಹೆಚ್ಚು ಶಾಸಕರುಗಳಲ್ಲಿ ಕಾಣುತ್ತಿಲ್ಲ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಅತಿಯಾದ ಬೆಲೆ ಏರಿಕೆ, ಸಾಲು ಸಾಲು ಹಗರಣಗಳು, ಬಿ***** ಗ್ಯಾರಂಟಿಗಳು ವಿರೋಧ ಪಕ್ಷಗಳಿಗೆ ಆಹಾರವಾದಂತೆ ಕಾಣುತ್ತಿವೆ.
ಹಿಂದೆ ಲೋಕಾಯುಕ್ತರಾದ ಸಂತೋಷ ಹೆಗಡೆಯವರು ಹೇಳಿದಂತೆ ರಾಜ್ಯದಲ್ಲಿ ಗ್ಯಾರಂಟಿಯಿಂದ ಜನರು ಸೊಮೇರಿಗಳಾಗುವಂತೆ ಮಾಡಿವೆ,
ಸುಪ್ರೀಂ ಕೋರ್ಟ್ ಸಹ ಗ್ಯಾರಂಟಿ ಬಗ್ಗೆ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನು ಇಲ್ಲಿ ಉಲ್ಲೇಖಿಸಬಹುದು.ಗ್ಯಾರಂಟಿ ಗಳಿಂದ ರಾಜ್ಯ ಬಜೆಟ್ ನಲ್ಲಿ ಜಿಲ್ಲೆಗಳಿಗೆ ತಾರತಮ್ಯವಾಗಿದೆ ಎಂಬ ಮಾತು ಸಹ ಕೇಳಿ ಬರುತ್ತಿದೆ ಇದಕ್ಕೆ ಸರ್ಕಾರವೇ ಉತ್ತರ ಕೊಡಬೇಕು.

News Updates

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಡ್ಯಾಪ್ಕೋ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಆರ್ ಟಿ ಇ ಎಸ್ ಕಾಲೇಜ ಪ್ರಥಮ ವಾದರೆ, ಮಹಿಳಾ ವಿಭಾಗದಲ್ಲಿ ರಾಣೇಬೆನ್ನೂರ್ ನ ಆರ್. ಆರ್ ಕಾಲೇಜು ಜಿಲ್ಲೆ ಗೆ ಪ್ರಥಮ.

News Updates

ಆರ್. ಎಸ್.ರಾಮನಗೌಡ್ರ ಸಾರಥ್ಯದಲ್ಲಿ.

ನಮ್ಮ ಹಾವೇರಿ 24X7

haveriexpress78@gmail.com
Contact: 7892724924