Namma Haveri 24X7 News

Bureau Report

ಹಾವೇರಿ ಜಿಲ್ಲೆಯಲ್ಲೊಂದು ಲವ್ ಜಿಹಾದ್ ಶೆಂಕೆ “ನರ್ಸ್ ಸ್ವಾತಿ “ಮರ್ಡರ್ ಕೇಸ್,ನಯಾಜ್ ಪೊಲೀಸ್ ವಶಕ್ಕೆ ಮತ್ತಿಬ್ಬರಿಗಾಗಿ ಪೊಲೀಸರ ಶೋಧ. ಜಿಲ್ಲಾಧ್ಯಂತ ತೀವ್ರಗೊಂಡ ಹಿಂದೂ ಪರ ಸಂಘಟನೆಗಳ ಹೋರಾಟ.

ಹಾವೇರಿ : ಹಾವೇರಿ ಜಿಲ್ಲೆಯ ರಟ್ಟಹಳ್ಳಿ ತಾಲೂಕಿನ ಮಾಸೂರ್ ಗ್ರಾಮದ ಯುವತಿ ನರ್ಸ್ ಸ್ವಾತಿ ಮರ್ಡರ್ ಕೇಸ್ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಸ್ವಾತಿಯನ್ನು ಮದುವೆಯಾಗುವದಾಗಿ ನಂಬಿಸಿ ಮದುವೆಗೆ ನಿರಾಕರಿಸಿದ ಯುವಕನನ್ನು ಯುವತಿ ತರಾಟೆಗೆ ತೆಗೆದುಕೊಂಡಿದ್ದಳು,ಇದರಿಂದ ಕೋಪ ಗೊಂಡ ಯುವಕ ಆತನ ಸ್ನೇಹಿತರ ಜೊತೆಗೂಡಿ ಆಕೆಯನ್ನ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಕೊಲೆ ಹಿನ್ನಲೆ : ಸ್ವಾತಿ ಮಾರ್ಚ್ 3ನೇ ತಾರೀಕು ಸೋಮವಾರ ಬೆಳಿಗ್ಗೆ ಎಂಟು ಗಂಟೆಗೆ ಮನೆಯಿಂದ ರಾಣೆಬೆನ್ನೂರು ಹೋಗಿದ್ದಳು. ತಾಯಿ ಮಧ್ಯಾಹ್ನ ಫೋನ್ ಮಾಡಿದಾಗ ಅಮ್ಮನಿಗೆ ಬರುವುದಾಗಿ ತಿಳಿಸಿದಳು. ತಾಯಿ ಮತ್ತು ಏಳು ಗಂಟೆಗೆ ಫೋನ್ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಗಾಬರಿಗೊಂಡ ತಾಯಿಗೆ ಏಳನೇ ತಾರೀಕಿಗೆ ಮಿಸ್ಸಿಂಗ್ ಕೇಸ್ ದಾಖಲು ಮಾಡಿದಳು.
ಮಾ. 6ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ಅಪರಿಚಿತ ಯುವತಿ ಶವ ಪತ್ತೆಯಾಗಿತ್ತು. ಮೊದಲಿಗೆ ಯು.ಡಿ.ಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಹಲಗೇರಿ ಠಾಣೆ ಪೊಲಿಸರು ಯುವತಿ ಶವದ ಮರಣೋತ್ತರ ಪರೀಕ್ಷೆ ಮಾಡಿ ಅಂತ್ಯಸಂಸ್ಕಾರ ಕೂಡಾ ಮಾಡಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯನ್ನು ಯಾರೋ ಕೊಲೆ ಮಾಡಿ ತುಂಗಭದ್ರಾ ನದಿಯಲ್ಲಿ ಬಿಸಾಡಿ ಹೋಗಿರೋದು ಗೊತ್ತಾಗಿತ್ತು. ತನಿಖೆ ಆರಂಭಿಸಿದ ಪೊಲೀಸರಿಗೆ ಅದು ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಎಂಬ ಯುವತಿ ಶವ ಎನ್ನುವುದು ಗೊತ್ತಾಗಿದೆ.
ಸ್ವಾತಿ ಎಂಬ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಯಾಜ್ ಹಾಗೂ ವಿನಯ್, ದುರ್ಗಾಚಾರಿ ಎಂಬ ಯುವಕರೇ ಹತ್ಯೆಗೈದವರು ಎಂದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ನಯಾಜ್ ಹಿರೇಕೇರೂರು ತಾಲೂಕು ಹಳೆ ವಿರಾಪುರ ಗ್ರಾಮದವನು. ಕೊಲೆಯಾದ ಸ್ವಾತಿ ಹಾಗೂ ಕೊಲೆ ಮಾಡಿದ ಮೂವರು ಆರೋಪಿಗಳು ಹೋರಿ ಬೆದರಿಸೋ ಸ್ಪರ್ಧೆ ಅಭಿಮಾನಿಗಳಾಗಿದ್ದರು. ಹೋರಿ ಬೆದರಿಸೋ ಸ್ಪರ್ಧೆ ಇದ್ದಲಿಗೆ ಸ್ವಾತಿ ಹಾಜರಾಗ್ತಿದ್ದಳು. ಈ ವೇಳೆ ನಯಾಜ್, ವಿನಯ್, ದುರ್ಗಾಚಾರಿ ನಡುವೆ ಸ್ನೇಹ ಬೆಳೆದಿತ್ತು.
ಬಳಿಕ ಆರೋಪಿ ನಯಾಜ್ ಹಾಗೂ ಸ್ವಾತಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನಯಾಜ್, ಸ್ವಾತಿಯನ್ನು ಬಿಟ್ಟು ತಮ್ಮ ಧರ್ಮದ ಯುವತಿ ಜೊತೆ ಮದುವೆಯಾಗಲು ಬಯಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಸ್ವಾತಿ ನನಗೆ ಮೋಸ ಮಾಡಬೇಡ ಅಂತ ಜಗಳ ಆಡಿದ್ದಳು. ಬಳಿಕ ನಯಾಜ್ ಹಾಗೂ ಸ್ವಾತಿ ನಡುವೆ ಭಿನ್ನಾಭಿಪ್ರಾಯ ಶುರುವಾಗಿತ್ತು. ವಿನಯ್ ಹಾಗೂ ದುರ್ಗಾಚಾರಿಗೆ ಈ ವಿಚಾರವನ್ನು ನಯಾಜ್ ತಿಳಿಸಿದ್ದ. ಸ್ವಾತಿ ಕಾಟ ಹೆಚ್ಚಾಗಿದೆ ಅವಳ ಕಥೆ ಮುಗಿಸಬೇಕು ಎಂದು ಮೂವರೂ ಮಾತಾಡಿಕೊಂಡಿದ್ದರು.
ಮಾ. 3ರಂದು ಆರೋಪಿಗಳು ಸ್ವಾತಿಗೆ ಫೋನ್ ಮಾಡಿ ಬರ ಹೇಳಿದ್ದರು. ಬಾಡಿಗೆ ಕಾರ್ ಮಾಡಿಕೊಂಡು ಬಂದು ಆಕೆಯನ್ನು ಆರೋಪಿಗಳು ಕಾರಿನಲ್ಲಿ ಕರೆದೊಯ್ದಿದ್ದರು. ರಾಣೇಬೆನ್ನೂರು ಹೊರ ವಲಯದ ಸುವರ್ಣ ಪಾರ್ಕ್ ಕರೆದುಕೊಂಡು ಹೋಗಿದ್ದರು. ಬಾಡಿಗೆ ಕಾರಿನಲ್ಲಿ ರಟ್ಟಿಹಳ್ಳಿ ಬಳಿ ಇರುವ ಕಬ್ಬಿಣಕಂತಿ ಮಠದ ಬಳಿ ಪಾಳು ಬಿದ್ದಿರುವ ತರಳಬಾಳು ಶಾಲೆಗೆ ಕರೆದೊಯ್ದು ಕುತ್ತಿಗೆಗೆ ಟವಲ್ ಹಾಕಿ ಉರುಳು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಕಾರಿನ ಡಿಕ್ಕಿಯಲ್ಲಿ ಶವ ಸಾಗಿಸಿದ್ದು, ತುಂಗಭದ್ರಾ ನದಿಗೆ ಶವ ಬಿಸಾಡಿದ್ದರು.
ಹಿಂದೂ ಯುವತಿ ಹತ್ಯೆ ಜಸ್ಟೀಸ್ ಫಾರ್ ಸ್ವಾತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲಾಗಿದೆ. ಹಿಂದೂ ಸಂಘಟನೆಗಳಕಾರ್ಯಕರ್ತರಿಂದ ಸ್ವಾತಿ ಹಂತಕರನ್ನು ಪತ್ತೆ ಹಚ್ಚಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕೆಂದು ಆಗ್ರಹ ವ್ಯಕ್ತವಾಗುತ್ತಿದೆ.
ಹಾವೇರಿ ಎಸ್ಪಿ ಅಂಶುಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿ ಮಾರ್ಚ್ 6 ರಂದು ನಮಗೆ ಅಪರಿಚಿತ ಶವ ಸಿಕ್ಕಿತ್ತು. ಮಾರ್ಚ್​ 11 ರಂದು ಅದು ಸ್ವಾತಿ ರಮೇಶ್ ಬ್ಯಾಡಗಿ ಎಂಬುವವರ ಮೃತದೇಹ ಆಗಿತ್ತು ಎಂದು ಗೊತ್ತಾಗಿತ್ತು. ತನಿಖೆ ನಡೆಸಿದಾಗ ಮೂವರು ಆರೋಪಿಗಳ ಸುಳಿವು ಸಿಕ್ಕಿದೆ ಅದರಲ್ಲಿ ನಯಾಜ್, ವಿನಾಯಕ, ದುರ್ಗಾಚಾರಿ ಎಂಬ ಆರೋಪಿಗಳು ಕೊಲೆಯಲ್ಲಿ ನೇರ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ. ಸ್ವಾತಿಗೆ ಮೂವರು ಪರಿಚಯಸ್ತರಾಗಿದ್ದು ಕೊಲೆಗೂ ಮುನ್ನ ರಾಣೆಬೆನ್ನೂರು ಬಳಿ ಸ್ವಾತಿ ಹತ್ತಿರ ಮಾತನ್ನಾಡಿದ್ದಾರೆ. ಕೆಲ ವಿಚಾರದಲ್ಲಿ ಇವರ ಮಧ್ಯೆ ಭಿನ್ನಾಭಿಪ್ರಾಯವಿತ್ತು. ಬಳಿಕ ಸ್ವಾತಿಯನ್ನು ಕೊಲೆ ಮಾಡಿ ಕಾರಿನಲ್ಲಿ ಶವಸಾಗಿಸಿ ತುಂಗಭದ್ರಾ ನದಿಯಲ್ಲಿ ಬಿಸಾಡಿದ್ದಾರೆ. ನಯಾಜ್​ನನ್ನು ಈಗಾಗಲೇ ಅರೆಸ್ಟ್ ಮಾಡಿದ್ದೀವಿ. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು ಉಳಿದವರಿಗಾಗಿ ಪತ್ತೆಹಚ್ಚಿ ಬಂಧಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

News Updates

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಡ್ಯಾಪ್ಕೋ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಆರ್ ಟಿ ಇ ಎಸ್ ಕಾಲೇಜ ಪ್ರಥಮ ವಾದರೆ, ಮಹಿಳಾ ವಿಭಾಗದಲ್ಲಿ ರಾಣೇಬೆನ್ನೂರ್ ನ ಆರ್. ಆರ್ ಕಾಲೇಜು ಜಿಲ್ಲೆ ಗೆ ಪ್ರಥಮ.

News Updates

ಆರ್. ಎಸ್.ರಾಮನಗೌಡ್ರ ಸಾರಥ್ಯದಲ್ಲಿ.

ನಮ್ಮ ಹಾವೇರಿ 24X7

haveriexpress78@gmail.com
Contact: 7892724924