ರಾಣೇಬೆನ್ನೂರ್ : ನಗರದಲ್ಲಿ ನಿರಂತರವಾಗಿ ಸುರುತ್ತಿರುವ ಮಳೆಯಿಂದ ರಸ್ತೆಗಳು ಗುಂಡಿಮಯವಾಗಿವೆ. ಚರಂಡಿಗಳು ಹೂಳಿನಿಂದ ತುಂಬಿಕೊಂಡಿವೆ. ಆದರೆ ಗಮನಹರಿಸಬೇಕಾದ ನಗರಸಭೆ ಅಧಿಕಾರಿಗಳು ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆಗಾಲದ ಸಮಯದಲ್ಲಿ ಸಾಂಕ್ರಾಮಿಕ ರೋಗಗಳು ಅತಿ ಹೆಚ್ಚು.ಡೆಂಗ್ಯೂ, ಮಲೇರಿಯಾ, ಚಿಕ್ಕನ್ ಗುನ್ಯಾ ದಂತಹ ಕಾಯಿಲೆಗಳು ಚಿಕ್ಕ ಮಕ್ಕಳು, ವಯೋವೃದ್ಧರು ಎನ್ನದೆ ವ್ಯಾಪಕವಾಗಿ ಹರಡುವುದನ್ನ ಕಾಣುತ್ತೇವೆ ಹೀಗಿರುವಾಗ ಮುಂಜಾಗ್ರತ ಕ್ರಮಗಳನ್ನು ವಹಿಸುವುದು ಅವಶ್ಯಕವಾಗಿದೆ.
ರಾಣೆಬೆನ್ನೂರು ನಗರಸಭೆ ಕರ್ನಾಟಕ ರಾಜ್ಯದಲ್ಲಿಯೇ ಕಂದಾಯ ವಸೊಲಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗಿರುವಾಗ ನಗರಸಭೆಗೆ ಬರುವ ಆದಾಯ ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿದೆಯೋ,ಇಲ್ಲವೋ ಎಂಬ ಅನುಮಾನ ಈಗ ಬಹು ಚರ್ಚೆಯ ವಿಷಯವಾಗಿದೆ.
ರಸ್ತೆ,ಚರಂಡಿ ,ಕುಡಿಯುವ ನೀರು ಸಾರ್ವಜನಿಕ ಉಪಯೋಗಕ್ಕಾಗಿ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗೇ ನಗರ ಮತ್ತು ತಾಲೂಕಿನ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆಗಳು ಅಭಿವೃದ್ಧಿಯ ಹಂತ ಕಾಣದೆ ಮರೆಮಾಚುತಿರುವುದು ಕೆಲವು ಅನುಮಾನಗಳಿಗೆ ಕಾರಣವಾಗಿದೆ.
ರಾಣೆಬೆನ್ನೂರು ತಾಲೂಕಿನ ಅಭಿವೃದ್ಧಿ ಕಾಣದ ಸಮಸ್ಯೆಗಳು ಮತ್ತು ಸವಾಲುಗಳು.
1.ಗುಂಡಿ ಬಿದ್ದ ರಸ್ತೆಗಳು,
2.ಸ್ವಚ್ಛತೆ ಕಾಣದೇ ಇರುವ ಚರಂಡಿಗಳು, 3.ಅಭಿವೃದ್ಧಿ ಕಾಣದ ಪಾರ್ಕ್ ಗಳು,
4.ಪರರ ಪಾಲಾಗುತ್ತಿರುವ ಸಿಎ ಸೈಟುಗಳು,
5. ನಿರ್ಗತಿಕರ ವಸತಿ ಯೋಜನೆಗಳು,ಇತರೆ
ತಾಲೂಕಿನ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಬಗ್ಗೆ ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗುವುದನ್ನು ಗಮನಿಸುತಿದ್ದೇವೆ, ಆದರೆ ನೋಡಿಯಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳ ಕಡೆ ಗಮನಹರಿಸುವುದು ಬಿಟ್ಟು ಮೊಂಡತನಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಆಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಅಭಿವೃದ್ಧಿ ಕಡೆ ಗಮನ ಹರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ವಿಶೇಷ ವರದಿ :ಆರ್. ಎಸ್. ರಾಮನಗೌಡ್ರ
ಸಂಪಾದಕರು :ಹಾವೇರಿ ಎಕ್ಷ ಪ್ರೆಸ್








































