ಈ ಕ್ಯಾನ್ಸರ್ ಅನ್ನೋದು ಬಂದಿದ್ದು ಎಲ್ಲಿಂದ?
ಪ್ರಪಂಚದ ಇತಿಹಾಸವನ್ನ ನೋಡಿದಾಗ ಗ್ರೀಕ್ ಮತ್ತು ರೋಮನ್ ಪುಸ್ತಕಗಳಲ್ಲಿ ಕ್ಯಾನ್ಸರ್ ಬಗ್ಗೆ ಉಲ್ಲೇಖ ಸಿಗುತ್ತೆ. ಕ್ರಿ.ಪೂ. 470 ಮತ್ತು 370 ರ ನಡುವೆ, ಗ್ರೀಕ್ ವೈದ್ಯಕೀಯದ ಪಿತಾಮಹ ಎಂದು ಕರೆಯಲ್ಪಡುವ ಹಿಪ್ಪೊಕ್ರೇಟ್ಸ್, ಕ್ಯಾನ್ಸರ್ ಅನ್ನು ಮೊದಲು ಕಾರ್ಸಿನೋಸ್ ಅಥವಾ ಕಾರ್ಸಿನೋಮ ಎಂದು ಕರೆದರು. ಗ್ರೀಕ್ ಭಾಷೆಯಲ್ಲಿ ಕಾರ್ಸಿನೋಸ್ ಎಂದರೆ ಏಡಿ.
ಕ್ಯಾನ್ಸರ್ಗೆ ಈ ಹೆಸರು ಬಂದಿದ್ಯಾಕೆ?
ಕ್ಯಾನ್ಸರ್ ಬಗ್ಗೆ ನಾವು ಈಗ ಸ್ವಲ್ಪ ಸರಳವಾಗಿ ತಿಳಿದುಕೊಳ್ಳೋಣ. ಆಗ ಡಾಕ್ಟರ್‌ಗಳು ತುಂಬಾ ಜನ ಕ್ಯಾನ್ಸರ್ ರೋಗಿಗಳನ್ನ ಪರೀಕ್ಷಿಸಿದಾಗ, ಅವ್ರ ದೇಹದಲ್ಲಿ ಗಟ್ಟಿ ಗಟ್ಟಿ ಉಂಡೆಗಳಿರೋದು ಕಂಡುಬಂದಿದೆ. ಈ ಉಂಡೆಗಳು ಒಂದು ಕಡೆಯಿಂದ ಇನ್ನೊಂದು ಕಡೆ ಹರಡುತ್ತಾ ಹೋಗುತ್ತೆ ಅಂತಾನೂ ಗೊತ್ತಾಯ್ತು. ರೋಗ ಜಾಸ್ತಿ ಆದ ಹಾಗೆ ನೋವು ಕೂಡ ತಡೆಯೋಕೆ ಆಗದಷ್ಟು ಜಾಸ್ತಿ ಆಗುತ್ತೆ ಅಂತ ರೋಗಿಗಳು ಹೇಳಿದ್ದರು.










































