ಬೆಂಗಳೂರು : ರಾಜ್ಯದಲ್ಲಿ ಬಡವರ ಪರ ನಾವಿದ್ದೇವೆ ಎಂಬ ಘೋಷಣೆಯೊಂದಿಗೆ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮೇಲಿಂದ ಮೇಲೆ ಬೆಲೆ ಏರಿಕೆ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ 20 ತಿಂಗಳಲ್ಲಿ ಮೂರು ಬಾರಿ ಹಾಲಿನ ದರ ಏರಿಕೆಯಾಗಿದೆ. ಇದು 20 ತಿಂಗಳಲ್ಲಿ ಹಾಲಿನ ದರ 9 ರುಪಾಯಿ ಏರಿಕೆಯಾಗಿದ್ದು, ಪ್ರಸ್ತುತ ಯುಗಾದಿ ಪ್ರಯುಕ್ತ 4 ರೂಪಾಯಿ ಏರಿಕೆ ಇದೆ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ.
ಈ ಬಗ್ಗೆ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜನ ಪರ ವಾಗಿದೆ ಎಂಬ ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಈಗ ಯುಗಾದಿ ಗಿಫ್ಟಾಗಿ ಮತ್ತೆ ಬೆಲೆ ಏರಿಕೆ ಮಾಡಿದೆ ಎಂದು ಲೇವಡಿ ಮಾಡಿದ್ದಾರೆ.
ಪ್ರಸ್ತುತ ರಾಜ್ಯ ಸರ್ಕಾರ ಹಾಲಿನ ದರವನ್ನ ಮಾತ್ರ ಏಕೆ ಮಾಡದೇ
1. ಮೆಟ್ರೋ ದರ ಏರಿಕೆ
2. ಕರೆಂಟ್ ಬಿಲ್ ದರ ಏರಿಕೆ
3. ಮಧ್ಯದ ದರ ಏರಿಕೆ
ಇಷ್ಟೇ ಅಲ್ಲದೆ ಎಲ್ಲಾ ಇಲಾಖೆಗಳಲ್ಲೂ ಬೆಲೆ ಏರಿಕೆ ಬಿಸಿ ಸಾರ್ವಜನಿಕರಿಗೆ ತಟ್ಟಿದ್ದಂತು ನಿಜ ಬೇಲಿಗೆ ಓತಿ ಖಾಟ ಸಾಕ್ಷಿ ಎಂಬಂತೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವುದು ಮಂಗನ ಕೈಯಲ್ಲಿ ಅಧಿಕಾರ ಕೊಟ್ಟಂತಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಮೇಲಿಂದ ಮೇಲೆ ದಂಗೆ ಏಳುತ್ತಿರುವ ಶಾಸಕರಿಗೆ ಅನುದಾನ ಕೊರತೆ ಇದ್ದು ಇದರಿಂದ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ನಡೆಯುತ್ತಿಲ್ಲ ಎಂಬ ಆರೋಪಗಳಿವೆ. ಬಿ ***** ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು ಜನ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇವುಗಳನ್ನ ಸರಿದೂಗಿಸಲು ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.
ರಾಜ್ಯದಲ್ಲಿದಿನದಿಂದ ದಿನಕ್ಕೆ ಕಾಂಗ್ರೆಸ್ ಪಕ್ಷದ ವರ್ಚಸ್ಸು ಕಡಿಮೆಯಾಗುತ್ತಿದ್ದು ‘ಕೊಟ್ಟು ಕಿತ್ತುಕೊಳ್ಳುವ” ಸರ್ಕಾರಕ್ಕೆ ಜನ ಇಡೀ ಶಾಪ ಹಾಕುತ್ತಿದ್ದಾರೆ. ಇನ್ನು ಮುಂದೆಯಾದರೂ ಜನಪರ ಕಾಳಜಿಗಾಗಿ ಬೆಲೆ ಏರಿಕೆ ಕಡಿಮೆ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ವಿಶೇಷ ವರದಿ :
ಆರ್. ಎಸ್. ರಾಮನಗೌಡ್ರ
ಸಂಪಾದಕರು, ವಿರಾಟ ರೂಪಂ
ಕನ್ನಡ ವಾರಪತ್ರಿಕೆ.








































