ರಾಣೇಬೆನ್ನೂರ್ :ರಾಣೇಬೆನ್ನೂರಿನ ಹಲಗೇರಿ ರಸ್ತೆಯ ಎಸ್.ಆರ್.ಕೆ ಬಡಾವಣೆ ಹತ್ತಿರದ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಕಡ್ಡಾಯವಾಗಿ ಬಸ್ ನಿಲ್ಲಿಸಲು ಹಾಗೂ ಕಂಡಕ್ಟರ್, ಡ್ರೈವರ್ ಮೇಲೆ ಶಿಸ್ತು ಕ್ರಮ ಜರುಗಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಣೇಬೆನ್ನೂರ ಹಾಸ್ಟೆಲ್ ಘಟಕ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಸಾರಿಗೆ ನಿಯಂತ್ರಣಾಧಿಕಾರಿ ಅವರ ಮೂಲಕ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಹಾಸ್ಟೆಲ್ ಉಪಸಮಿತಿ ರಾಜ್ಯ ಸಂಚಾಲಕ ಅರುಣ್ ನಾಗವತ್, ಹಾಸ್ಟೆಲ್ ವಿದ್ಯಾರ್ಥಿನಿ ದ್ರಾಕ್ಷಯಿಣಿ ಎನ್, ಸುನಿತಾ ಹನುಮಪುರ, ವಸತಿ ನಿಲಯದ ಮೇಲ್ವಿಚಾರಕಿ ಪ್ರಭಾವತಿ ಅಲಗಣ್ಣನವರ ಮಾತನಾಡಿದರು.
ಈ ಸಂದರ್ಭದಲ್ಲಿ ನೀಲಾ ಕೆ, ಸುಮಾ ಎನ್, ಸೌಮ್ಯ ಆರ್ ಕೆ, ಅಶ್ವಿನಿ ಹೆಚ್, ಚೆನ್ನಮ್ಮ ಬಿ ಆರ್, ಐಶ್ವರ್ಯ, ಹೊನ್ನಮ್ಮ, ಚಂದ್ರಲೇಖ, ರಕ್ಷಿತಾ, ಲಮಾಣಿ, ಚಂದ್ರಕಲಾ, ಗೀತಾ, ಜ್ಯೋತಿ, ಮಧುಶ್ರೀ, ಪವಿತ್ರ, ಶೃತಿ, ಶ್ರೀ ಲೇಖ, ಭೂಮಿಕಾ, ನಯನ, ವೀಣಾ ಡಿ, ಲಕ್ಷ್ಮಿ, ರಂಜಿತ, ರೋಜಾ, ಸ್ಪೂರ್ತಿ, ಸುಪ್ರಿತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Deputy Commissioner Haveri Siddaramaiah
SFI – Students’ Federation of India
SFI Karnataka Sfi haveri








































