ಹಾವೇರಿ : ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ಮೆಕ್ಕೆಜೋಳ ಫಸಲು ರೈತರ ಕೈ ಸೇರುವ ಮೊದಲೇ ಬೆಲೆ ಕುಸಿತ ರೈತರನ್ನ ಕಂಗಾಲಾಗುವಂತೆ ಮಾಡಿದೆ. ರಾಣಿಬೆನ್ನೂರಿನ ಹುಲಿಹಳ್ಳಿ ಮೆಗಾ ಮಾರುಕಟ್ಟೆ ಬಳಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಇಂದು ತಹಶೀಲ್ದಾರ್ ಆರ್.ಎಚ್. ಭಾಗವಾನ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಮೆಕ್ಕೆಜೋಳಕ್ಕೆ ₹3000 ಕನಿಷ್ಠ ಬೆಂಬಲ ಬೆಲೆ ಘೋಷಿಸಿ ಮತ್ತು ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಹನುಮಂತಪ್ಪ ಕಬ್ಬಾರ ಅವರು “ರೈತರು ಬೆಳೆ ಬೆಳೆಸಲು ಸಾಲ ಮಾಡುತ್ತಾರೆ, ಆದರೆ ಬೆಲೆ ಸಿಗದಿದ್ದರೆ ಅವರ ಮೇಲೇ ಹೊರೆ ಬೀಳುತ್ತದೆ. ಪ್ರಸ್ತುತ ಟೆಂಡರ್ ದರ ₹1700 ರಿಂದ ₹1950 ನಡುವೆ ಇದ್ದು, ಇದು ರೈತರಿಗೆ ತೀರಾ ಅನ್ಯಾಯವಾಗಲಿದೆ ಎಂದು ಹೇಳಿದರು.
ರೈತರ ಆಗ್ರಹಗಳು:
√ ಮೆಕ್ಕೆಜೋಳಕ್ಕೆ ₹3000 ಕನಿಷ್ಠ ಬೆಂಬಲ ಬೆಲೆ ಘೋಷಣೆ
√ ಮೆಕ್ಕೆಜೋಳವನ್ನು ಪಿಡಿಎಸ್‌ಗೆ ಸೇರಿಸುವಂತೆ ಕೇಂದ್ರ ಸರ್ಕಾರದ ಹಸ್ತಕ್ಷೇಪ ತಡೆ.
√ ಮೆಗಾ ಮಾರುಕಟ್ಟೆಯ ಇ-ಟೆಂಡರ್ ಸಮಯವನ್ನು ಬೆಳಿಗ್ಗೆ 11ಕ್ಕೆ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಮನವಿ.
ಈ ಬಗ್ಗೆ ನವೆಂಬರ್ 14ರೊಳಗೆ ಖರೀದಿ ಕೇಂದ್ರ ತೆರೆಯದಿದ್ದರೆ ಅಹೋರಾತ್ರಿ ಧರಣಿ ಆರಂಭಿಸುವುದಾಗಿ ರೈತರು ಸರಕಾರಕ್ಕೆ ಎಚ್ಚರಿಕ್ಕೆ ನೀಡಿದ್ದರು.








































