Namma Haveri 24X7 News

Bureau Report

ಯಶಸ್ವಿ ಪತ್ರಕರ್ತನಾಗಲು ಇರಬೇಕಾದ ಅರ್ಹತೆ ಮತ್ತು ಜವಾಬ್ದಾರಿಗಳು.

ಹಾವೇರಿ, ರಾಣೇಬೆನ್ನೂರ್ : ಪತ್ರಿಕೋದ್ಯಮ ಎಂಬ ಪದವು ಸುದ್ದಿ ಮತ್ತು ಮಾಹಿತಿಯನ್ನು ಸೂಚಿಸುತ್ತದೆ. ಮುಖ್ಯವಾಗಿ ಸುದ್ದಿ ಮತ್ತು ಮಾಹಿತಿಯನ್ನು ಲೇಖನಗಳು ವರದಿಗಳು ಪ್ರಸಾರಗಳು ಅಥವಾ ಟ್ವೀಟ್ ಸೇರಿದಂತೆ ಹಲವು ವಿಧಗಳಲ್ಲಿ ಪ್ರಸ್ತುತ ಪಡಿಸಬಹುದಾಗಿದೆ. ಪತ್ರಿಕೋದ್ಯಮವು ಸಂವಹನದ ಒಂದು ರೂಪವಾದರೆ ಪ್ರೇಕ್ಷಕರಿಗೆ ಏಕಮುಖ ಸಂದೇಶ ವಿವಿಧ ರೂಪಗಳಲ್ಲಿ ವ್ಯಕ್ತಪಡಿಸುವುದಾಗಿದೆ.
ಉದಾಹರಣೆಗೆ..
1. ಬಿಸಿ ಬಿಸಿ ಸುದ್ದಿ
2. ವೈಶಿಷ್ಟ್ಯದ ಕಥೆಗಳು
3. ತನಿಖಾ ವರದಿಗಳು
4. ಸಂಪಾದಕೀಯಗಳು
5. ವಿಮರ್ಶೆಗಳು
6. ಸಂದರ್ಶನಗಳು ಹೀಗೆ ಹತ್ತು ಹವಾರಗಳಿವೆ ಒಟ್ಟಾರೆ ಅಧುನಿಕ ಸಮಾಜದಲ್ಲಿ ಯಶಸ್ವಿ ಪತ್ರಕರ್ತನಾಗಲು ಇರಬೇಕಾದ ಅರ್ಹತೆ ಮತ್ತು ಜವಾಬ್ದಾರಿಗಳನ್ನು ಕುರಿತು ತಿಳಿಸಲಾಗಿದೆ.
ಒಬ್ಬ ಯಶಸ್ವಿ ಪತ್ರಕರ್ತನಾಗಲು ರಾಷ್ಟ್ರೀಯ ಪ್ರಾದೇಶಿಕ ಮತ್ತು ಸ್ಥಳೀಯ ಪತ್ರಿಕೆಗಳಿಗೆ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಜನರ ಸ್ಥಳೀಯ ಆಸಕ್ತಿಗಳಿಗೆ ಅನುಗುಣವಾಗಿ ವಿಷಯಗಳನ್ನು ಹುಡುಕುವುದು& ಪ್ರಚಲಿತ ಸುದ್ದಿಗಳು,ರಾಜಕೀಯ,ಕ್ರೀಡೆ,ಕಲೆ ಮತ್ತು ಸಂಸ್ಕೃತಿ ವಿಜ್ಞಾನ ಮತ್ತು ವ್ಯವಹಾರದ ಬಗ್ಗೆ ವರದಿಗಳನ್ನು ಮಾಡುವುದು.

ಒಬ್ಬ ಯಶಸ್ವಿ ಪತ್ರಕರ್ತನ ಜವಾಬ್ದಾರಿಗಳು :

1. ವಿಭಿನ್ನ ಸಮೀಕ್ಷೆಗಳಲ್ಲಿ ಜನರನ್ನ ಸಂದರ್ಶಿಸುವುದು.
2. ಪೊಲೀಸ್ ಮತ್ತು ತುರ್ತು ಸೇವೆಗಳು, ಆರೋಗ್ಯ ವಿವಿಧ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರೊಂದಿಗೆ ಸುದ್ದಿಗಳ ಮಾಹಿತಿ ಪಡೆದುಕೊಳ್ಳುವುದು.
3. ಪತ್ರಿಕಾ ಪ್ರಕಟಣೆಗಳು ಮತ್ತು ಇತರ ಮಾಧ್ಯಮಗಳ ಮೂಲಕ ಕಥೆಗಳನ್ನು ಹುಡುಕುವುದು ಮತ್ತು ತನಿಖೆ ಮಾಡುವುದು.
4. ಪತ್ರಿಕಾಗೋಷ್ಠಿಗಳಿಗೆ ಹಾಜರಾಗುವುದು ಮತ್ತು ಪ್ರಶ್ನೆಗಳನ್ನು ಕೇಳುವುದು.
5. ನ್ಯಾಯಾಲಯದ ವಿಚಾರಣೆಗಳು, ಸ್ಥಳೀಯ ಕಾರ್ಯಕ್ರಮಗಳಲ್ಲಿ ಹಾಜರಾಗುವುದು.
6. ಡಿಜಿಟಲ್ ವೆಬ್ ಸೈಟ್ ಗಳಿಗಾಗಿ ಸುದ್ದಿ ವಿಷಯವನ್ನು ರಚಿಸುವುದು ಮತ್ತು ಅಪ್ಲೋಡ್ ಮಾಡುವುದು.
7.ಪತ್ರಕರ್ತನಿಗೆ ಅಧುನಿಕ ತಂತ್ರಜ್ಞಾನದ ಅನಿಕ ವಿಧಾನಗಳ ಮಾರ್ಗಗಳನ್ನು ಅಳವಡಿಸಿಕೊಳ್ಳುವುದು.

ಒಬ್ಬ ಪತ್ರಕರ್ತನಿಗೆ ಇರಬೇಕಾದ ಅರ್ಹತೆಗಳು :

1.ಪತ್ರಕರ್ತನಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
2. ನಾಯಕತ್ವದ ಗುಣವಿರಬೇಕು.
3. ಸುದ್ದಿಯ ತೀರ್ಪಿಗೆ ಬದ್ಧನಾಗಿರಬೇಕು.
4 ನ್ಯಾಯ ಸಮ್ಮತೆ,ವಸ್ತುನಿಷ್ಠತೆ ಮತ್ತು ಪ್ರಮಾಣಿಕತೆ ವಿಷಯ ಪ್ರಕಟಿಸಲು ಬದ್ಧನರಾಗಿರಬೇಕು.
5. ನೈತಿಕತೆ ಮತ್ತು ಸಮಗ್ರತೆ
6. ಸತ್ಯವನ್ನ ಧೈರ್ಯದಿಂದ ಕೇಳುವವನಾಗಿರಬೇಕು
7. ಆಧುನಿಕ ತಂತ್ರಜ್ಞಾನ ಮತ್ತು ಸಂವಹನ ಕೌಶಲ್ಯಗಳ ಬಗ್ಗೆ ಅರಿತಿರಬೇಕು.
8. ತನಿಖಾ ಕೌಶಲ್ಯಗಳ ಬಗ್ಗೆ ಅಂದರೆ ಸಾಕ್ಷಿಗಳು ಮತ್ತು ಸತ್ಯಗಳ ಮೇಲೆ ಒರೆ ಹಚ್ಚಿ ಬರೆಯುವ ಕೌಶಲ್ಯ ಒಳಗೊಂಡಿರಬೇಕು.

ಒಬ್ಬ ನಿಜವಾದ ಪತ್ರಕರ್ತ ವಿಷಯದ ವಿಶ್ಲೇಷಣೆ ವರದಿ ಮಾಡುವುದು ಸಂದರ್ಶನ ಅಧ್ಯಯನ ಪರೀಕ್ಷೆ ದಾಖಲಾತಿ ಮೌಲ್ಯಮಾಪನ ಮತ್ತು ಸಂಶೋಧನೆಯಿಂದ ಬರುತ್ತದೆ. ಯಾರದು? ಅವರು ಏನು ಮಾಡಿದರು? ಅವರು ಎಲ್ಲಿದ್ದರು? ಇದು ಯಾವಾಗ ಸಂಭವಿಸಿತು? ಇದು ಏಕೆ ಸಂಭವಿಸಿತು? ಹೀಗೆ ಒಬ್ಬ ಪತ್ರಕರ್ತ ಮುಖ್ಯವಾಗಿ ಜವಾಬ್ದಾರಿ ಸುದ್ದಿಯನ್ನು ಸತ್ಯವಾದ ಪಕ್ಷಪಾತವಿಲ್ಲದ ಮತ್ತು ರಾಜಕೀಯ ವಿರೋಧಿ ರೀತಿಯಲ್ಲಿ ವರದಿ ಮಾಡುವುದು. ತನ್ನ ಸ್ವಂತ ಬರವಣಿಗೆ ಮಾನದಂಡಳಿಗೆ ಭದ್ದವಾಗಿ ಇದೆ ಎಂಬುವುದನ್ನು ಖಚಿತ ಪಡಿಸಿಕೊಳ್ಳುವುದು ಪ್ರಕಟಣೆಗೆ ಬುದ್ಧನಾಗಿರುವುದು ಮುಖ್ಯವಾಗಿರುತ್ತದೆ.

ವಿಶೇಷ ವರದಿ :ಆರ್.ಎಸ್. ರಾಮನಗೌಡ್ರ
ಸಂಪಾದಕರು :ಹಾವೇರಿ ಎಕ್ಷಪ್ರೆಸ್

News Updates

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಡ್ಯಾಪ್ಕೋ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಆರ್ ಟಿ ಇ ಎಸ್ ಕಾಲೇಜ ಪ್ರಥಮ ವಾದರೆ, ಮಹಿಳಾ ವಿಭಾಗದಲ್ಲಿ ರಾಣೇಬೆನ್ನೂರ್ ನ ಆರ್. ಆರ್ ಕಾಲೇಜು ಜಿಲ್ಲೆ ಗೆ ಪ್ರಥಮ.

News Updates

ಆರ್. ಎಸ್.ರಾಮನಗೌಡ್ರ ಸಾರಥ್ಯದಲ್ಲಿ.

ನಮ್ಮ ಹಾವೇರಿ 24X7

haveriexpress78@gmail.com
Contact: 7892724924