Namma Haveri 24X7 News

Bureau Report

BIG BREAKING : ಉಪಸಭಾಪತಿ ರುದ್ರಪ್ಪ ಲಮಾಣಿ ಕಾರು ಅಪಘಾತ – ಸ್ಥಿತಿ ಗಂಭೀರ

ಚಿತ್ರದುರ್ಗ:ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಅಪಘಾತಕ್ಕೀಡಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಜಿಲ್ಲೆಯ ಹಿರಿಯೂರ ತಾಲೂಕಿನ ಜವನಗೊಂಡನಹಳ್ಳಿ ಸಮೀಪದಲ್ಲಿ ಲಮಾಣಿ ಅವರಿಗೆ ಸ್ಕೂಟರ್ ಡಿಕ್ಕಿಯಾಗಿದ್ದು, ಗಂಭೀರಗವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಸ್ವಗ್ರಾಮಕ್ಕೆ ತೆರಳುವಾಗ ಮಾರ್ಗಮಧ್ಯ, ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಲಮಾಣಿ ಅವರು ಇಳಿದಾಗ ಅದೇ ವೇಳೆ ಬಂದಂತಹ ಸ್ಕೂಟರ್ ಡಿಕ್ಕಿ ಹೊಡೆದಿದೆ. ಆಗ ಅವರ ತಲೆ, ಕೈ, ಕಾಲುಗಳಿಗೆ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿದೆ.
ಕೂಡಲೇ ಲಮಾಣಿ ಅವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

News Updates

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಡ್ಯಾಪ್ಕೋ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಆರ್ ಟಿ ಇ ಎಸ್ ಕಾಲೇಜ ಪ್ರಥಮ ವಾದರೆ, ಮಹಿಳಾ ವಿಭಾಗದಲ್ಲಿ ರಾಣೇಬೆನ್ನೂರ್ ನ ಆರ್. ಆರ್ ಕಾಲೇಜು ಜಿಲ್ಲೆ ಗೆ ಪ್ರಥಮ.

News Updates

ಆರ್. ಎಸ್.ರಾಮನಗೌಡ್ರ ಸಾರಥ್ಯದಲ್ಲಿ.

ನಮ್ಮ ಹಾವೇರಿ 24X7

haveriexpress78@gmail.com
Contact: 7892724924