ಹಾವೇರಿ:ಸಮಾಜ ಕಲ್ಯಾಣ ಇಲಾಖೆ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ನಡೆಯುವ ನಾಲ್ಕನೇ ತರಗತಿಯ ಆಶ್ರಮ ಶಾಲೆಗಳಿಗೆ ಪ್ರತಿವರ್ಷ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗುತ್ತಿವೆ, ಆದರೆ ಈ ಪ್ರವೇಶ ಪ್ರಕ್ರಿಯೆಯಲ್ಲಿ ಆಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಈ ಪ್ರವೇಶ ಪ್ರಕ್ರಿಯೆಯಲ್ಲಿ ಶಿಕ್ಷಣ ಮಾಫಿಯಾ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ ಪಾಲಕರು ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೇರವಾಗಿ ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ಸಲ್ಲಿಸಿದ ಮಾಹಿತಿಯನ್ನು ಆಯ್ಕೆಗಾಗಿ ಅ*** ತಾಲೂಕಿನ ಶಾಸಕರಿಗೆ ಕಳಿಸುತ್ತಾರೆ. ಈ ಶಾಸಕರು ತಮ್ಮ ಸಂಬಂಧಿಕರ ಮಕ್ಕಳು, ಆತ್ಮೀಯರು,ಪಕ್ಷದ ಕಾರ್ಯಕರ್ತರ ಮಕ್ಕಳ ಹೆಸರನ್ನು ಟಿಕ್ ಮಾಡಿ ಕಳಿಸುತ್ತಾರೆ. ಈ ಅವೈಜ್ಞಾನಿಕ ಆಯ್ಕೆ ಪ್ರಕ್ರಿಯೆಗೆ ಈಗ ರಾಜ್ಯ ಮತ್ತು ಜಿಲ್ಲೆಯಲ್ಲಿ ವ್ಯಾಪಕ ಖಂಡನೆಯ ವ್ಯಕ್ತವಾಗುತ್ತಿದೆ. ಕಾರಣ ಏನು ಅಂದರೆ ಏನೋ ಅರಿಯದ ಬಡ ಪಾಲಕರ ಮಕ್ಕಳು ಮೌಲ್ಯ ಆಧಾರಿತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂಬ ಗಂಭೀರ ಆರೋಪ ಈ ಇಲಾಖೆಗಳ ಮೇಲೆ ಕೇಳಿ ಬರುತ್ತಿದೆ.
ರಾಜ್ಯದಲ್ಲಿ ಆಶ್ರಮ ಶಾಲೆಗಳಿಗೆ ಇಷ್ಟು ಬೆಲೆ ಬರಲು ಕಾರಣ :
ಈ ಆಶ್ರಮ ಶಾಲೆಗಳಲ್ಲಿ ನಾಲ್ಕನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು 6ನೇ ತರಗತಿಗೆ ಶೇಕಡ 25 ರಷ್ಟು ಕೋಟ ಅಡಿ ಎಲ್ಲಾ ಮಕ್ಕಳು ಆಯ್ಕೆಯಾಗುವುದರಿಂದ ಈಗ ಇಂತಹ ಆಶ್ರಮ ಶಾಲೆಗಳಿಗೆ ಬಂಗಾರದ ಬೆಲೆ ಬಂದಂತಾಗಿದೆ.
ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯರ ಹರಕೆ ಉತ್ತರ:
ಅರ್ಜಿ ಹಾಕಿದ ಪಾಲಕರು ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯರಿಗೆ ನಮ್ಮ ಮಗ ಆಯ್ಕೆ ಆಗಿದೆಯೇ? ಎಂದು ಫೋನ್ ಮಾಡಿ ಕೇಳಿದರೆ ಇಲ್ಲ ರೀ ನಿಮ್ಮ ಮಗಂದು ಟಿಕ್ ಮಾಡಿ ಕಳಿಸಿಲ್ಲ ನೀವು ಶಾಸಕರು ಅಥವಾ ಅವರ ಪಿ ಎ ಗಳಿಂದ ಒಂದು ಫೋನ್ ಮಾಡಿಸಿ ಯಾರಾದರೂ ಬಿಟ್ಟು ಹೋದರೆ ತೆಗೆದುಕೊಳ್ಳುತ್ತೇವೆ ಎಂಬ ಹರಕೆ ಉತ್ತರ ನೀಡುತ್ತಾರೆ. ಇದರಿಂದ ಬಡ ಮಕ್ಕಳಿಗೆ ಆಶ್ರಮ ಶಾಲೆಯ ಶಿಕ್ಷಣ ಎಲೆಮರೆಕಾಯಿ ಆಗಿದೆ ಎಂದರೆ ತಪ್ಪಾಗಲಾರದು. ಇಂತಹ ವ್ಯವಸ್ಥೆಯಲ್ಲಿ ಶಿಕ್ಷಣ ವ್ಯಾಪಾರಿಕರಣವಾಗಿ ಪರಿಗಣಿಸಿದೆ.
ಆಯ್ಕೆ ಪ್ರಕ್ರಿಯೆ ಮಾರ್ಗಸೂಚಿ ಅನ್ವಯ ನಡೆಯುತ್ತಿಲ್ಲ :
ಅರ್ಜಿ ಸಲ್ಲಿಸಿದ ಎಲ್ಲಾ ಮಕ್ಕಳ ಮೀಸಲಾತಿ ವಾರು, ಅಂಕವಾರು ಆಯ್ಕೆ ಪಟ್ಟಿ ಪ್ರಕಟಿಸಬೇಕು ಆದರೆ ಇದ್ಯಾವುದು ನಡೆಯುತ್ತಿಲ್ಲ ಎಂಬ ಗಂಭೀರ ಆರೋಪ ಈ ಎಲ್ಲ ಇಲಾಖೆಗಳ ಮೇಲಿದೆ. ಇದಕ್ಕೆ ಸೂಕ್ತ ತನಿಖೆ ಆಗಬೇಕು. ಈ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲು ಇಲಾಖೆಯ ವೆಬ್ಸೈಟ್ಗಳಲ್ಲಿ ಅರ್ಜಿಯನ್ನು ಕರೆಯಬೇಕು. ವೆಬ್ಸೈಟ್ನಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಬೇಕು ಎಂಬ ಕೂಗು ರಾಜ್ಯದಲ್ಲಿ ಕೇಳಿ ಬರುತ್ತದೆ. ಇದಕ್ಕೆ ಸರ್ಕಾರ ಮತ್ತು ಇಲಾಖೆಗಳು ಯಾವ ಕ್ರಮ ಕೈಗೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.








































