Namma Haveri 24X7 News

Bureau Report

ರಾಣೇಬೆನ್ನೂರ ನಗರದಲ್ಲಿ ಶಾಲಾ ಶಿಕ್ಷಣ ಇಲಾಖೆ ಅಡಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಆಯೋಜನೆ.

ಹಾವೇರಿ,ರಾಣೇಬೆನ್ನೂರ್* : 2025-26 ನೇ ಸಾಲಿನ ರಾಜ್ಯದ ಮುಂದುವರಿದ ಯೋಜನಾ ಕಾರ್ಯಕ್ರಮ ಅಡಿಯಲ್ಲಿ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಸಂಬಂಧ ಸರ್ಕಾರಿ, ಅನುದಾನಿತ,ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಿಗೆ ಶಾಲೆ, ಕ್ಲಸ್ಟರ್, ತಾಲೂಕ್ ಮತ್ತು ಜಿಲ್ಲಾಮಟ್ಟದ ವರೆಗೆ ಏಕರೂಪದ ಸ್ಪರ್ಧೆಗಳನ್ನು ನಡೆಸುವ ಸಂಬಂಧ ವಿವಿಧ ವಿಷಯಗಳಿಗೆ ಅನುಗುಣವಾಗಿ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ರಾಣೆಬೆನ್ನೂರು ನಗರದಲ್ಲಿ ಆಯೋಜನೆ ಮಾಡಲಾಗಿತು.
ಮಕ್ಕಳಿಗೆ ಪಾಠದ ಜೊತೆಗೆ ಆಟದ ಮೂಲಕ ಅವರ ಪ್ರತಿಭೆಗಳನ್ನು ಹೊರತರಲು ಪಠ್ಯತರ ಚಟುವಟಿಕೆಗಳನ್ನು ಪ್ರತಿಭಾ ಕಾರಂಜಿ ಎಂಬ ಸ್ಪರ್ಧೆಯ ಮೂಲಕ ಆಯೋಜನೆಯನ್ನು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ :4 ರಲ್ಲಿ ಒಂದರಿಂದ ನಾಲ್ಕನೇ ತರಗತಿ ಮತ್ತು ಐದನೇ ತರಗತಿಯಿಂದ 7ನೇ ತರಗತಿ ಮಕ್ಕಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಕಾರ್ಯಕ್ರಮವನ್ನು ರಾಣೆಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಎಸ್.ಅಡಿಗ ರವರು ಉದ್ಘಾಟನೆ ಮಾಡಿದರು.ತಾಲೂಕ ಕೋರ್ಡಿನೇಟರ್ ಮಂಜು ನಾಯಕ್, ಜಿಲ್ಲಾ ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷರಾದ ಬಿ. ಪಿ. ಶಿಡೆನೋರ್ , ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಾಟಣ್ಣನವರ್ ಮಾಡಿದರು, ರವಿಕುಮಾರ್ ಪಾಟೀಲ್ ಸಿ ಆರ್ ಪಿ ರಾಣೆಬೆನ್ನೂರು, ಮುಖೊಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 04, ಶ್ರೀ ಮಾಲತೇಶ್ ಅಧ್ಯಕ್ಷರು ಎಸ್ ಡಿ ಎಂ ಸಿ ಇವರು ಹಾಜರಿದ್ದರು.
” ಛದ್ಮ ವೇಷ ” ಕ್ಲಸ್ಟರ್ ಮಟ್ಟದ 01 ರಿಂದ 4ನೇ ತರಗತಿ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶಿರಡಿ ಸಾಯಿ ಇಂಟರ್ನ್ಯಾಷನಲ್ ಸ್ಕೂಲ, ರಾಣೇಬೆನ್ನೂರ್ ನ ಕುಮಾರಿ,ನವ್ಯಶ್ರೀ ಆರ್. ಆರ್. ಪಡೆದುಕೊಂಡಿದ್ದಕ್ಕೆ ಶಾಲೆಯ ಮುಖೋಪಾಧ್ಯಾಯರಾದ ಮಣಿಕಂಠ ತೊಗಟವೀರ್, ಶಾಲಾ ಸಿಬ್ಬಂದಿ ವರ್ಗ ಮತ್ತು ಶಾಲಾ ಕಮಿಟಿಯವರು ಅಭಿನಂದಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ರಾಣೆಬೆನ್ನೂರು ನಗರದ ಒಂದನೇ ತರಗತಿಯಿಂದ 4ನೇ ತರಗತಿ & 5 ರಿಂದ 7ನೇ ತರಗತಿ ವರೆಗಿನ ನಗರದ ಸರ್ಕಾರಿ, ಅನುದಾನಿತ,ಅನುದಾನ ರಹಿತ ಎಲ್ಲಾ ಶಾಲಾ ಮಕ್ಕಳು ವಿವಿಧ ಸ್ಪರ್ಧೆಗಳಾದ ಕವನ ವಾಚನ, ಭಾಷಣ ಸ್ಪರ್ಧೆ, ಭಕ್ತಿ ಗೀತೆ, ಕ್ಲೇ ಮಾಡ್ಲಿಂಗ್, ಅಭಿನಯ ಗೀತೆ, ಚಿತ್ರಕಲೆ, ಕಥೆ ಹೇಳುವುದು, ಕಂಠಪಾಠ, ಧಾರ್ಮಿಕ ಪಠಣ ಹೀಗೆ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

News Updates

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಡ್ಯಾಪ್ಕೋ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಆರ್ ಟಿ ಇ ಎಸ್ ಕಾಲೇಜ ಪ್ರಥಮ ವಾದರೆ, ಮಹಿಳಾ ವಿಭಾಗದಲ್ಲಿ ರಾಣೇಬೆನ್ನೂರ್ ನ ಆರ್. ಆರ್ ಕಾಲೇಜು ಜಿಲ್ಲೆ ಗೆ ಪ್ರಥಮ.

News Updates

ಆರ್. ಎಸ್.ರಾಮನಗೌಡ್ರ ಸಾರಥ್ಯದಲ್ಲಿ.

ನಮ್ಮ ಹಾವೇರಿ 24X7

haveriexpress78@gmail.com
Contact: 7892724924