ರಾಣೇಬೆನ್ನೂರ್ : 2025-26 ನೇ ಸಾಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ರಾಣೆಬೆನ್ನೂರಿಗೆ ಬಾಡಿಗೆ ವಾಹನ ಟೆಂಡರ್ ಪ್ರಕ್ರಿಯೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸದೇ ಇರುವುದು ಕಂಡುಬಂದಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಸರ್ಕಾರದ ಪ್ರೋಟೋಕಾಲ್ ಅನುಸರಿಸಬೇಕಾಗುತ್ತದೆ. ಆದರೆ ರಾಣೆಬೆನ್ನೂರಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಮನ ಬಂದಂತೆ ಟೆಂಡರ್ ಕರೆದಿರುವುದು ಕೆಲವು ಅನುಮಾನಗಳಿಗೆ ಕಾರಣವಾಗಿದೆ.
ಮ್ಯಾನುವಲ್ ಟೆಂಡರ್ ಪ್ರೋಟೋಕಾಲ್ ಪ್ರಕಾರ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
* ಟೆಂಡರ್ ಕರೆದಾಗ ಅದನ್ನ ಹೆಚ್ಚು ಪ್ರಚಾರಗೊಳಿಸಬೇಕು. ಸ್ಥಳೀಯ ಪತ್ರಿಕೆ ಮತ್ತು ರಾಜ್ಯ ಪತ್ರಿಕೆಗಳಲ್ಲಿ ಪ್ರಕಟಗೊಳಿಸಬೇಕು.
* ಟೆಂಡರಿಗೆ ಅರ್ಜಿ ಸಲ್ಲಿಸಲು ಟೆಂಡರ್ದಾರರಿಗೆ ಹೆಚ್ಚು ಕಾಲಾವಕಾಶ ನೀಡಬೇಕು.
* ತಾಂತ್ರಿಕ ಮತ್ತು ಆರ್ಥಿಕ ಬಿಡ್ ಬಗ್ಗೆ ಮಾಹಿತಿ ಒದಗಿಸಬೇಕು.
* ಟೆಂಡರ್ ಪ್ರಕ್ರಿಯೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ವಿಡಿಯೋ ಚಿತ್ರೀಕರಣಗೊಳ್ಳಬೇಕು ಎಲ್ಲಾ ಕಡೆಗಳಲ್ಲಿಯೂ ಸಿ ಸಿ ಕ್ಯಾಮೆರಾ ಗಳನ್ನು ಅಳವಡಿಸಿರಬೇಕು.
* ಸರ್ಕಾರದ ನಿಗಮಗಳಿಂದ ವಾಹನಗಳನ್ನು ಪಡೆದವರಿಗೆ ಮೊದಲ ಆದ್ಯತೆಯನ್ನು ನೀಡಬೇಕು.
* ನೋಂದಾಯಿತ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEಗಳು) ಸಾಮಾನ್ಯ ಹಣಕಾಸು ನಿಯಮಗಳು (General Financial Rules. GFRs) 2017 ರ ನಿಯಮ 170 ರ ಪ್ರಕಾರ, ಬಿಡ್ ಭದ್ರತೆಯಾಗಿ EMD ಸಲ್ಲಿಸುವುದರಿಂದ ವಿನಾಯಿತಿ ಕೊಡಬೇಕು.
ಸರ್ಕಾರದ ನಿಗಮಗಳಿಂದ ವಾಹನಗಳನ್ನು ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರಿಗೆ ಇ ಎಂ ಡಿ ಇಂದ ವಿನಾಯಿತಿ ನೀಡಬೇಕು.
NSIC (National Small Industries Corporation Limited (NSIC))ಗೆ ಸಮಾನವಾಗಿ ಪರಿಗಣಿಸಲ್ಪಟ್ಟ ಕೆವಿಐಸಿ (Khadi and Village Industries Commission (KVIC))ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ನೋಂದಾಯಿಸಲ್ಪಟ್ಟ ಮತ್ತು ಕಾಲಕಾಲಕ್ಕೆ ಸರ್ಕಾರದಿಂದ ಸೂಚಿಸಲಾದ ಪಾರ್ಟ್-II/ಉದ್ಯೋಗ ಆಧಾರ್ ಅನ್ನು ಸಲ್ಲಿಸುವ ಎಂಎಸ್‌ಇ(Micro, Small, and Medium Enterprises, )ಗಳನ್ನು ಸಹ ಇಎಮ್‌ಡಿ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಒಟ್ಟು ಅಂದಾಜು ಮೌಲ್ಯದ 2% ದರದಲ್ಲಿ ಇಎಂಡಿ ವಿಧಿಸಲಾಗುತ್ತದೆ, ಇದನ್ನು ಎಲ್ಲಾ ಘಟಕಗಳನ್ನು ಗಣನೆಗೆ ತೆಗೆದುಕೊಂಡು ಗರಿಷ್ಠ 5 ಲಕ್ಷ ರೂ.ಗಳಿಗೆ ಒಳಪಟ್ಟು ಲೆಕ್ಕ ಹಾಕಬೇಕು.
ಕರ್ನಾಟಕ ಟೆಂಡರ್‌ಗಳಲ್ಲಿ, ಅರ್ನೆಸ್ಟ್ ಮನಿ ಠೇವಣಿ (EMD) ಸಾಮಾನ್ಯವಾಗಿ ಅಗತ್ಯವಾಗಿರುತ್ತದೆ, ಆದರೆ ಮೊತ್ತ ಮತ್ತು ವಿನಾಯಿತಿಗಳಂತಹ ನಿರ್ದಿಷ್ಟ ವಿವರಗಳು ಟೆಂಡರ್ ಮತ್ತು ಟೆಂಡರ್‌ದಾರರ ವರ್ಗವನ್ನು ಅವಲಂಬಿಸಿ ಬದಲಾಗುತ್ತವೆ.
ಕರ್ನಾಟಕ ಸರ್ಕಾರವು ಇ-ಆಡಳಿತ ಶಕೆಯನ್ನು ಪ್ರಾರಂಭಿಸುವಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ಧೃಡ ನಂಬಿಕೆಯನ್ನಿಟ್ಟು ಸರ್ಕಾರದ ಕಾರ್ಯಾಚರಣೆಯನ್ನು ಸರಳೀಕರಣಗೊಳಿಸುತ್ತಿದೆ.ತನ್ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಉತ್ತಮ ಗುಣಮಟ್ಟ ಸಾರ್ವಜನಿಕರಿಗೆ ನಿಯತವಾಗಿ ಮಾಹಿತಿಗಳ ಲಭ್ಯತೆ ಹಾಗೂ ದಕ್ಷತೆ ಮತ್ತು ಮಿತ ವ್ಯಯದೊಂದಿಗೆ ಸೇವೆಗಳ ಪೂರೈಕೆಯ ಜೊತೆಗೆ ಗುರುತಿಸಲಾದ ಸೇವೆಗಳನ್ನು ಅನ್‌ಲೈನ್‌ನಲ್ಲಿ ಒದಗಿಸುವಲ್ಲಿ ಸರ್ಕಾರವು ಶ್ರಮಿಸುತ್ತಿದೆ.








































