Namma Haveri 24X7 News

Bureau Report

“ಗೋಲ್ಡ್ “ರಾಬರಿ ಪ್ರಕರಣದಲ್ಲಿ ಇಬ್ಬರು ಪಿಎಸ್ಐಗಳ ಬಂಧನ.

ದಾವಣಗೆರೆ: ಆಭರಣ ತಯಾರಕನ ಬೆದರಿಸಿ ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಇಬ್ಬರು ಪಿಎಸ್ಐಗಳ ಸೇರಿ ನಾಲ್ವರನ್ನ ಬಂಧಿಸಿರುವ ಪ್ರಕರಣ ನಡೆದಿದೆ.

ಪಿಎಸ್ಐಗಳಾದ ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣಕುಮಾರ್ ಸೇರಿ ನಾಲ್ವರ ಬಂಧನವಾಗಿದ್ದು, ದಾವಣಗೆರೆ ಪೂರ್ವ ವಲಯ ಐಜಿಪಿ ಕಚೇರಿಯಲ್ಲಿ ಇಬ್ಬರು ಪಿಎಸ್ಐಗಳು ಕಾರ್ಯನಿರ್ವಹಿಸುತ್ತಿದ್ದರು.

ಸ್ಥಳ ನಿರೀಕ್ಷೆ ತೋರಿಸಿ ಹಾವೇರಿ ಜಿಲ್ಲೆಯ ರಾಣೆಬೇನ್ನೂರ ಸಂಚಾರ ಠಾಣೆ ಹಾಗೂ ಹಂಸಬಾವಿ ಠಾಣೆಯಿಂದ ದಾವಣಗೆರೆ ಪೂರ್ವ ವಲಯ ಐಜಿಪಿ ಕಚೇರಿಗೆ ವರ್ಗಾವಣೆಯಾಗಿದ್ದ ಪಿಎಸ್ಐಗಳು, ಕಾರವಾರ ಮೂಲದ ಆಭರಣ ತಯಾರಕ ವಿಶ್ವನಾಥ್ ಅರ್ಕಸಾಲಿ ಬೆದರಿಸಿ ದರೋಡೆ ಮಾಡಿದ್ದರು.

ದಾವಣಗೆರೆಯ ಚಿನ್ನದ ವ್ಯಾಪಾರಿಗಳಿಂದ ಗಟ್ಟಿ ಚಿನ್ನ ಪಡೆದು ಆಭರಣ ತಯಾರಿಸಿ ನೀಡುತ್ತಿದ್ದ ವಿಶ್ವನಾಥ್, ದಾವಣಗೆರೆಯ ಚಿನ್ನದ ವ್ಯಾಪಾರಿಗಳ ಬಳಿ ಗಟ್ಟಿ ಚಿನ್ನ, ಉಂಗುರ ಪಡೆದು ಕಾರವಾರಕ್ಕೆ ತೆರಳುತ್ತಿದ್ದ ಸಮಯದಲ್ಲಿ ಪಿಎಸ್ಐಗಳು ಆಟವಾಡಿದ್ದಾರೆ.

ನವೆಂಬರ್ 24ರ ಮಧ್ಯರಾತ್ರಿ 12.30ಕ್ಕೆ ದಾವಣಗೆರೆ ಬಸ್ ನಿಲ್ದಾಣದಿಂದ ಹುಬ್ಬಳ್ಳಿಗೆ ಬಂದಿದ್ದ ವಿಶ್ವನಾಥನನ್ನು ಹಿಂಬಾಲಿಸಿ ಇಬ್ಬರು ಪಿಎಸ್ಐಗಳು ಬಂದಿದ್ದರು.

ಮಫ್ತಿಯಲ್ಲಿ ಬಂದು ಕೊರಳಪಟ್ಟಿ ಹಿಡಿದು ಕೆಳಗಿಳಿಸಿ ತಾವು ಪೊಲೀಸ್ ಅಧಿಕಾರಿಗಳೆಂದು ಬೆದರಿಕೆ ಹಾಕಿದ ಸಮಯದಲ್ಲಿ ವಿಶ್ವನಾಥ ಅವರನ್ನ ‘ನೀವು ಪೊಲೀಸ್ ಅಧಿಕಾರಿ ಅಂತಾ ನಾನು ಹೇಗೆ ನಂಬಲಿ’ ಎಂದು ಪ್ರಶ್ನಿಸಿದ್ದನು.

ಆಗ ಐಡಿ ತೋರಿಸಿ ಬಸ್ ನಿಲ್ದಾಣದ ಹೊರಗೆ ನಿಂತ ಪೊಲೀಸ್ ಜೀಪ್‌ನಲ್ಲಿ ಕೂರಿಸಿದ್ದ ಪಿಎಸ್ಐ ಮಾಳಪ್ಪ, ಪ್ರವೀಣಕುಮಾರ್, ಬಳಿಕ ಕೆಟಿಜೆ ನಗರ ಠಾಣೆಯವರೆಗೂ ಪೊಲೀಸ್ ಜೀಪ್‌‌ನಲ್ಲಿ ಕರೆದೊಯ್ದಿದ್ದರು.

ಅಲ್ಲಿಂದ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದ ಪಿಎಸ್ಐಗಳು, ನಿನ್ನ ಬಳಿ ಇರುವ ಚಿನ್ನದ ಗಟ್ಟಿ, ಆಭರಣ ಕೊಡು ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದರಂತೆ.

ತಾನು ಆಭರಣ ತಯಾರಿಸಿ ಕೊಡುವ ಕೂಲಿ ಕೆಲಸ ಮಾಡುತ್ತೇನೆ ಎಂದಿದ್ದ ವಿಶ್ವನಾಥ್‌ನನ್ನ ಬೆದರಿಸಿ ಬಳಿಯಿದ್ದ 76 ಗ್ರಾಂ ಚಿನ್ನದ ಗಟ್ಟಿ, 2.15 ಗ್ರಾಂ ಬೇಬಿ ರಿಂಗ್ ಪಡೆದಿದ್ದರು.

ಚಿನ್ನದ ಗಟ್ಟಿ, ಬೇಬಿ ಉಂಗುರ ಕಿತ್ತುಕೊಂಡು ಕಾರಿನಲ್ಲಿ ವಿಶ್ವನಾಥನನ್ನು ದಾವಣಗೆರೆ ಬಸ್ ನಿಲ್ದಾಣಕ್ಕೆ ಬಿಟ್ಟಿದ್ದ ಪಿಎಸ್ಐ ಮಾಳಪ್ಪ, ಪ್ರವೀಣ್ ಕುಮಾರ್.

ಊರಿಗೆ ಹೋಗಿ ನಡೆದ ಘಟನೆ ವಿವರಿಸಿ ದಾವಣಗೆರೆಗೆ ಮರಳಿದ್ದ ವಿಶ್ವನಾಥ್, ಕೆಟಿಜೆ ನಗರ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ಪಿಎಸ್ಐ ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣಕುಮಾರ್ ಅರೆಸ್ಟ್ ಮಾಡಲಾಗಿದೆ.

ಇಬ್ಬರು ಪಿಎಸ್ಐಗಳಿಗೆ ಮಾಹಿತಿ ನೀಡಿ ಸಹಾಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದಾವಣಗೆರೆಯ ವಿನಾಯಕ ನಗರದ ಸತೀಶ್ ರೇವಣ್ಕರ್, ಶಿರಸಿ ಮೂಲದ ನಾಗರಾಜ್ ರೇವಣ್ಕರ್ ಬಂಧುಸಲಾಗಿದೆ.

ಕೃತ್ಯಕ್ಕೆ ಬಳಸಿದ್ದ ಕಾರು, ನಕಲಿ ಗನ್ ವಶಕ್ಕೆ ಪಡೆದಿರುವ ಪೊಲೀಸರು, ಕೆಟಿಜೆ ನಗರ ಠಾಣೆಯಲ್ಲಿ ತಡರಾತ್ರಿವರೆಗೂ ಇಬ್ಬರು ಪಿಎಸ್ಐಗಳ ವಿಚಾರಣೆ ನಡೆಸಿದ್ದು, ಇಂದು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

News Updates

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಡ್ಯಾಪ್ಕೋ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಆರ್ ಟಿ ಇ ಎಸ್ ಕಾಲೇಜ ಪ್ರಥಮ ವಾದರೆ, ಮಹಿಳಾ ವಿಭಾಗದಲ್ಲಿ ರಾಣೇಬೆನ್ನೂರ್ ನ ಆರ್. ಆರ್ ಕಾಲೇಜು ಜಿಲ್ಲೆ ಗೆ ಪ್ರಥಮ.

News Updates

ಆರ್. ಎಸ್.ರಾಮನಗೌಡ್ರ ಸಾರಥ್ಯದಲ್ಲಿ.

ನಮ್ಮ ಹಾವೇರಿ 24X7

haveriexpress78@gmail.com
Contact: 7892724924