Namma Haveri 24X7 News

Bureau Report

“ರಾಯಲ್ ಸಿಟಿ” ರಾಣೆಬೆನ್ನೂರು ಗಾರ್ಬೇಜ್ ಸಿಟಿ ಆಗುವ ಮುನ್ನ,ಎಚ್ಚೆತ್ತುಕೊಳ್ಳದ ನಗರ ಸಭೆ ಅಧಿಕಾರಿಗಳು ..!

ರಾಣೇಬೆನ್ನೂರ್ : ರಾಣೆಬೆನ್ನೂರು ಏಷ್ಯಾ ಖಂಡದಲ್ಲಿಯೇ ಪ್ರಸಿದ್ಧವಾದ ಬೀಜೋತ್ಪಾದನಾ ,ಸಂಸ್ಕೃತಿಕ,ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ.

ರಾಣೆಬೆನ್ನೂರು ಶೃಂಗಾರ ಗೊಂಡ ರಾಣಿಯಂತೆ ಕಂಗೊಳಿಸಿ ಇರಬೇಕಾದದ್ದು ದಿನದಿಂದ ದಿನಕ್ಕೆ ತನ್ನ ಸೌಂದರ್ಯ ಕಳೆದುಕೊಳ್ಳುತ್ತ ಹೋಗುತ್ತಿದೆ ಇದಕ್ಕೆ ಪ್ರಮುಖ ಕಾರಣ ಹದಗೆಟ್ಟ ರಸ್ತೆಗಳು, ಸ್ವಚ್ಛತೆ ಕಾಣದ ಚರಂಡಿಗಳು, ಅವ್ಯವಸ್ಥೆಯೇ ಬೀದಿ ದೀಪ,ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಹತ್ತು ಹಲವರು ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತಿರುವುದು ಬೇಸರದ ಸಂಗತಿ.

ಬೀದಿ ದೀಪದ ಅವ್ಯವಸ್ಥೆ ಕತ್ತಲಿನಲ್ಲಿ ಕೆಲವು ಏರಿಯಾಗಳು :

ರಾಣೆಬೆನ್ನೂರಿನ ಕೆಲವು ಏರಿಯಾಗಳಲ್ಲಿ ಸರಿಯಾದ ಬೀದಿ ದೀಪದ ವ್ಯವಸ್ಥೆ ಇಲ್ಲದಿರುವುದು ಕಂಡುಬಂದಿದೆ. ಮೃತ್ಯುಂಜಯ ನಗರದ ಶಿರಡಿ ಸಾಯಿ ಇಂಟರ್ನ್ಯಾಷನಲ್ ಸ್ಕೂಲ್ ಪಕ್ಕದ ರಸ್ತೆ, ಕೊಪ್ಪದ ಲೇಔಟ್ ಹನ್ನೊಂದನೇ ಕ್ರಾಸ್, ಬನಶಂಕರಿ ನಗರ, ಮಾರುತಿ ನಗರ ಹೀಗೆ ಹತ್ತು ಹಲವರು ನಗರಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದು ಕಂಡುಬಂದಿದೆ
ನಗರ ಸಭೆಗೆ ಎಷ್ಟೋ ಬಾರಿ ಕರೆ ಮಾಡಿದರೋ ಬೀದಿ ದೀಪದ ವ್ಯವಸ್ಥೆ ಅವ್ಯವಸ್ಥೆಯ ಆಗಾರವಾಗಿ ಮಾರ್ಪಟ್ಟಿದೆ. ಬೀದಿ ದೀಪಕ್ಕಾಗಿ ಕರೆ ಮಾಡಿದ್ದಾರೆ, ಇದ್ದ ಸ್ಥಿತಿಯಲ್ಲಿ ಬೀದಿ ದೀಪ ರಿಪೇರಿ ಮಾತ್ರ ಮಾಡಿ ಹೋಗುತ್ತಾರೆ. ಹೊಸ ಬಲ್ಪುಗಳನ್ನು ಹಾಕಬೇಕೆಂದರೆ ಮತ್ತೊಬ್ಬರಿಗೆ ಕರೆ ಮಾಡುವ ವ್ಯವಸ್ಥೆ ನಗರಸಭೆಯಲ್ಲಿದೆ ಇಂತಹ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು.

ಅವ್ಯವಸ್ಥೆಯ ಆಗರವಾಧ ಪಾರ್ಕ್ ಗಳು :

ಇನ್ನೂ ರಾಣೆಬೆನ್ನೂರು ನಗರದಲ್ಲಿ ಎಷ್ಟು ಪಾರ್ಕಗಳಿವೆ ? ಎಷ್ಟು ಪಾರ್ಕಗಳು ಸುಸ್ಥಿತಿಯಲ್ಲಿವೆ? ಎಷ್ಟು ಪಾರ್ಕಗಳು ಸುಸ್ಥಿತಿಯನ್ನು ಕಳೆದುಕೊಂಡಿವೆ? ಸರಿಪಡಿಸುವ ಕ್ರಮವನ್ನ ನಗರಸಭೆ ಏನಾದರೂ ಕೈಗೊಂಡಿದೇಯಾ? ಎಂಬ ನೂರಾರು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಸಿಗುವುದು ಅವ್ಯವಸ್ಥೆಯ ಆಗರ ಹೀಗಿರುವಾಗ ಪಾರ್ಕಗಳ ಅವ್ಯವಸ್ಥೆ ಬಗ್ಗೆ ಹೇಳೋರಿಲ್ಲ ಕೇಳೋರಿಲ್ಲ ,ಎಷ್ಟೋ ಪಾರ್ಕಗಳು ಮುಳ್ಳಿನ ಗಿಡ ಮರಗಳು ಬೆಳೆದು ಕಸ ಗಳಿಂದ ತುಂಬಿ ಹೋಗಿವೆ. ಆರೋಗ್ಯಕ್ಕಾಗಿ ವಾಕಿಂಗ್ ಎಂದು ಪಾರ್ಕಗಳಿಗೆ ಹೋದವರಿಗೆ ಸಿಗುವುದು ಅನಾರೋಗ್ಯದ ಭಾಗ್ಯ. ಕೆಟ್ಟು ನಿಂತ ಸೈಕ್ಲಿಂಗ್, ಮುರಿದ ಮಕ್ಕಳ ಹಾಡುವ ಜೋಕಾಲಿಗಳು, ಹೀಗೆ ಹೇಳುತ್ತಾ ಹೊರಟರೆ ಪಾರ್ಕ್ ಗಳಲ್ಲಿ ಹತ್ತು ಹಲವಾರು ಕಣ್ಣಿಗೆ ಕಾಣುವ ಸಮಸ್ಯೆಗಳು ಕಾಣಸಿಗುತ್ತವೆ.

ಸ್ವಚ್ಛತೆ ಕಾಣದ ಚರಂಡಿಗಳು :

ಇನ್ನು ಪ್ರತಿ ಏರಿಯ ಅಥವಾ ವಾರ್ಡಗಳಲ್ಲಿ ಬರುವ ಚರಂಡಿಗಳನ್ನ ಹದಿನೈದು ದಿವಸಕ್ಕೆ ಒಮ್ಮೆಯಾದರೂ ಸ್ವಚ್ಛತೆ ಗೊಳಿಸಬೇಕು, ಆದರೆ ಇದ್ಯಾವುದೂ ಇಲ್ಲ. ಎರಡು ಮೂರು ತಿಂಗಳಾದರೂ ಯಾರು ಸುಳಿವೆ ಇರುವುದಿಲ್ಲ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರೆ ನಾಳೆ ಬರುತ್ತಾರೆ ಎಂಬ ಹರಕೆ ಉತ್ತರವನ್ನು ಮಾತ್ರ ನಿರೀಕ್ಷಿಸಲು ಸಾಧ್ಯ. ಇಂತಹ ಅಧಿಕಾರಿಗಳಿಂದ ಸ್ವಚ್ಛತೆಯನ್ನ ನಿರೀಕ್ಷಿಸಲು ಹೇಗೆ ಸಾಧ್ಯ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕಲುಷಿತ ಚರಂಡಿ ವ್ಯವಸ್ಥೆಯಿಂದ ಎಲ್ಲಿ ನೋಡಿದರೂ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ಹೀಗೆ ಹತ್ತು ಹಲವು ಕಾಯಿಲೆಗಳಿಂದ ಆಸ್ಪತ್ರೆಗಳು ರೋಗಿಗಳಿಂದ ತುಂಬಿತುಳುಕುತ್ತಿವೆ.

ಹದಿಗೆಟ್ಟ ನಗರದ ಪ್ರಮುಖ ರಸ್ತೆಗಳು :

ರಾಣೆಬೆನ್ನೂರಿನ ಕೆಲವು ವಾರ್ಡ್ ಮತ್ತು ಏರಿಯಾಗಳಲ್ಲಿನ ರಸ್ತೆಗಳಲ್ಲಿ ತೆಗ್ಗು ಗುಂಡಿಗಳು ಬಿದ್ದಿದ್ದು, ಅಲ್ಲಲ್ಲಿ ಜಲ್ಲಿಕಲ್ಲುಗಳನ್ನು ಹಾಕಿ ಸರಿಪಡಿಸ ವ್ಯವಸ್ಥೆ ಮಾಡಿದ್ದಾದರೂ ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದಿದ್ದು ಉಂಟು ಮತ್ತು ವಾಹನ ಟೈಯರ್ ಗಳನ್ನ ಚೂಪಾದ ಜಲ್ಲಿ ಕಲ್ಲುಗಳು ಚುಚ್ಚಿ ಬ್ಲಾಸ್ಟ್ ಆಗಿದ್ದು ಉಂಟು ಇದರಿಂದ ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕುವಂತಾಗಿದೆ. ಇನ್ನು ಮುಂದೆ ಆದರೂ ನಗರ ಸಭೆಯ ಅಧಿಕಾರಿಗಳು ಈ ಕಡೆ ಗಮನಹರಿಸುತ್ತಾರೆಯೇ ಎಂಬುದನ್ನ ಕಾದು ನೋಡಬೇಕಾಗಿದೆ.
ಹಾವೇರಿ ಜಿಲ್ಲೆಯಲ್ಲಿ ರಾಣೆಬೆನ್ನೂರು ತಾಲೂಕು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಂತಾಗಿದೆ. ಇಂತಹ ರಾಣಿಬೆನ್ನೂರು ವ್ಯಾಪಾರ ವಾಣಿಜ್ಯ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಬೇರೆ ಬೇರೆ ಕಡೆಗಳಿಂದ ಉದ್ಯೋಗ ಆರಿಸಿ ಬಂದ ಜನರು ನೌಕರರು, ವ್ಯಾಪಾರಸ್ಥರು, ಕಾರ್ಮಿಕರು ಇಲ್ಲೇ ನೆಲೆಸಲು ಹಂಬಲಿಸುತ್ತಿದ್ದಾರೆ . ಅಂತವರ ಬಗ್ಗೆ ನಗರಸಭೆ ಗಮನಹರಿಸಿ ವಸತಿ ಕಲ್ಪಿಸುವ ವ್ಯವಸ್ಥೆ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

News Updates

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಡ್ಯಾಪ್ಕೋ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಆರ್ ಟಿ ಇ ಎಸ್ ಕಾಲೇಜ ಪ್ರಥಮ ವಾದರೆ, ಮಹಿಳಾ ವಿಭಾಗದಲ್ಲಿ ರಾಣೇಬೆನ್ನೂರ್ ನ ಆರ್. ಆರ್ ಕಾಲೇಜು ಜಿಲ್ಲೆ ಗೆ ಪ್ರಥಮ.

News Updates

ಆರ್. ಎಸ್.ರಾಮನಗೌಡ್ರ ಸಾರಥ್ಯದಲ್ಲಿ.

ನಮ್ಮ ಹಾವೇರಿ 24X7

haveriexpress78@gmail.com
Contact: 7892724924