Namma Haveri 24X7 News

Bureau Report

ಗೋಲ್ಡ್ ಸ್ಮೋಗ್ಲಿಂಗ್ ಕೇಸಿನಲ್ಲಿ ರಾವ್ ನ್ಯಾಯಾಂಗ ಬಂಧನ

ಬೆಂಗಳೂರು: ನಟಿ, ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಪುತ್ರಿ ರನ್ಯಾ ರಾವ್ ಚಿನ್ನ ಅಕ್ರಮ ಕಳ್ಳ ಸಾಗಣೆ ಪ್ರಕರಣ ರಾಜ್ಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಡಿಆರ್‌ಐ ವಶದಲ್ಲಿದ್ದ ರನ್ಯಾ ರಾವ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್‌ ಆದೇಶಿಸಿದೆ. ಈಗ ರನ್ಯಾ ರಾವ್ ಮಲತಂದೆ ಕೆ. ರಾಮಚಂದ್ರ ರಾವ್‌ಗೆ ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ ಸಿಬಿಐ ಸಹ ತನಿಖೆ ಕೈಗೊಂಡಿದ್ದು, ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ.
ರನ್ಯಾ ರಾವ್ ತಂದೆ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕರು. ಈಗ ಕರ್ನಾಟಕ ಸರ್ಕಾರ ರನ್ಯಾ ರಾವ್ ಪ್ರಕರಣದ ಹಿನ್ನಲೆಯಲ್ಲಿ ಕೆ. ರಾಮಚಂದ್ರ ರಾವ್ ವಿರುದ್ಧ ತನಿಖೆಗೆ ಆದೇಶಿಸಿದೆ.
ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಕುಟುಂಬಕ್ಕೆ ಇರುವ ಶಿಷ್ಟಾಚಾರದ ನಿಯಮವನ್ನು ಬಳಕೆ ಮಾಡಿಕೊಂಡು ರನ್ಯಾ ರಾವ್ ವಿಮಾನ ನಿಲ್ದಾಣದಲ್ಲಿ ತಪಾಸಣೆ ಇಲ್ಲದೇ ಬರುತ್ತಿದ್ದರು ಎಂಬುದು ಆರೋಪವಾಗಿದೆ. ಆದ್ದರಿಂದ ಶಿಷ್ಟಾಚಾರ ಮತ್ತು ಕೆ. ರಾಮಚಂದ್ರ ರಾವ್ ವಿರುದ್ಧ ತನಿಖೆಗೆ ಆದೇಶಸಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾರ್ಚ್‌ 3ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ನಟಿ ರನ್ಯಾ ರಾವ್ ಬಂಧಿಸಿದ್ದರು. ರನ್ಯಾ ರಾವ್ ಮೂಲಕ ದುಬೈನಿಂದ ಚಿನ್ನವನ್ನು ತರಿಸುತ್ತಿದ್ದ ಆರೋಪಿ ತರುಣ್‌ ರಾಸರ್ಕಾರದ ಆದೇಶ: ಕೆ. ರಾಮಚಂದ್ರ ರಾವ್ ವಿರುದ್ಧ ತನಿಖೆಗೆ ಆದೇಶಿಸಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಮಹಾಲಕ್ಷ್ಮೀ ಹೆಚ್. ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ) ಒಳಾಡಳಿತ ಇಲಾಖೆ (ಅಪರಾಧಗಳು) ಆದೇಶವನ್ನು ಹೊರಡಿಸಿದ್ದಾರೆ
ಈ ಆದೇಶ ನಟಿ ರನ್ಯಾ ರಾವ್ ಇವರ ವಿರುದ್ಧದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪೊಲೀಸ್‌ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರಬಹುದಾದ ಸಂಭಾವ್ಯತೆ ಬಗ್ಗೆ, ಸಿಐಡಿ ಬೆಂಗಳೂರು ವತಿಯಿಂದ ವಿಚಾರಣೆ ನಡೆಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.
ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪದ ಹಿನ್ನಲೆಯಲ್ಲಿ ನಟಿ ರನ್ಯಾ ರಾವ್ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿರುತ್ತಾರೆ. ನಟಿ ರನ್ಯಾ ರಾವ್ ಇವರು ವಿದೇಶಗಳಿಗೆ ಹೋಗುವಾಗ ಮತ್ತು ಬರುವ ಸಂದರ್ಭಗಳಲ್ಲಿ ಪೊಲೀಸ್‌ ಸಿಬ್ಬಂದಿಗಳಿಂದ ಲೋಪಗಳು ಆಗಿರುವುದಾಗಿ ವಿವಿಧ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿರುತ್ತದೆ.
ಈ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರಬಹುದಾದ ಸಂಭಾವ್ಯತೆ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯಲು ಸಿಐಡಿ ಬೆಂಗಳೂರು, ವತಿಯಿಂದ ವಿಚಾರಣೆ ನಡೆಸುವ ಬಗ್ಗೆ ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿರುತ್ತದೆ.
ಸರ್ಕಾರದ ಆದೇಶ ದಿನಾಂಕ 10/03/2025ರ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ನಟಿ ರನ್ಯಾ ರಾವ್ ಅವರು ಕೈಗೊಳ್ಳಲಾಗಿದ್ದ ವಿದೇಶಿ ಪ್ರಯಾಣಗಳ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರಬಹುದಾದ ಸಂಭಾವ್ಯತೆ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯಲು ಸಿಐಡಿ ಬೆಂಗಳೂರು, ವತಿಯಿಂದ ವಿಚಾರಣೆಗೆ ವಹಿಸಿ ಆದೇಶಿಸಿದೆ.

ಈ ವಿಚಾರಣೆಯನ್ನು ನಡೆಸಲು ಸಂಬಂಧಪಟ್ಟ ಇಲಾಖೆಗಳು ಸಿಐಡಿ ಬೆಂಗಳೂರು, ಸಂಸ್ಥೆಗೆ ಸಂಪೂರ್ಣ ಸಹಕಾರ ಮತ್ತು ಅವಶ್ಯಕ ಮಾಹಿತಿ ದಾಖಲಾತಿಗಳನ್ನು ಸಹ ಒದಗಿಸುವುದು. ಸಿಐಡಿ ಬೆಂಗಳೂರು, ಸಂಸ್ಥೆಯು ಈ ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ವಿಚಾರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ಎಂದು ಹೇಳಿದೆ.
ರನ್ಯಾ ರಾವ್ ಚಿನ್ನ ಅಕ್ರಮ ಕಳ್ಳ ಸಾಗಣೆ ಪ್ರಕರಣದ ಹಿಂದೆ ಸಚಿವರೊಬ್ಬರಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತಿದ್ದವು. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಈ ಆರೋವನ್ನು ತಳ್ಳಿ ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗುಪ್ತಚರ ಇಲಾಖೆ ಮೂಲಕ ಪ್ರಕರಣದ ಕುರಿತು ಮಾಹಿತಿಗಳನ್ನು ಪಡೆದಿದ್ದಾರೆ.

ಮೂರು ದಿನಗಳ ಕಾಲ ರನ್ಯಾ ರಾವ್ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳ ವಶದಲ್ಲಿದ್ದರು. ಸೋಮವಾರ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶವನ್ನು ಹೊರಡಿಸಿದೆ.

ರನ್ಯಾ ರಾವ್ ಬಂಧನದ ಬಳಿಕ ಕೆ. ರಾಮಚಂದ್ರ ರಾವ್ ಪ್ರತಿಕ್ರಿಯೆ ನೀಡಿದ್ದರು, “ತಮಗೂ ಈ ಮಾಹಿತಿ ಮಾಧ್ಯಮಗಳ ಮೂಲಕ ತಿಳಿಯಿತು. ಹಲವು ದಿನಗಳಿಂದ ನಾವು ಮಗಳ ಜೊತೆ ಸಂಪರ್ಕದಲ್ಲಿಲ್ಲ” ಎಂದು ಹೇಳಿದ್ದರು.
ಎಎನ್‌ಐ ಜೊತೆ ಮಾತನಾಡಿದ್ದ ಅವರು, “ಮಾಧ್ಯಮದ ಸುದ್ದಿ ನೋಡಿ ನನಗೆ ಆಘಾತವಾಯಿತು. ಈ ವಿಚಾರ ನನಗೆ ತಿಳಿದಿರಲಿಲ್ಲ. ರನ್ಯಾ ನಮ್ಮ ಜೊತೆ ವಾಸ ಮಾಡುತ್ತಿಲ್ಲ. ಗಂಡನ ಜೊತೆ ಅವಳು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾಳೆ” ಎಂದು ತಿಳಿಸಿದ್ದರು.

ಕೆ. ರಾಮಚಂದ್ರ ರಾವ್, “ಮಗಳ ಸಂಸಾರದಲ್ಲಿ ಸಮಸ್ಯೆ ಉಂಟಾಗಿರಬಹುದು. ಕೌಟುಂಬಿಕ ಕಾರಣದಿಂದ ಅವರ ನಡುವೆ ಏನೋ ಸಮಸ್ಯೆ ಆಗಿರಬಹುದು. ಏನೇ ಆದರೂ ಕಾನೂನು ತನ್ನ ಕೆಲಸ ಮಾಡಲಿದೆ. ನನ್ನ ವೃತ್ತಿಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲ. ಹೆಚ್ಚು ಏನೂ ಹೇಳಲು ನಾನು ಇಷ್ಟಪಡುವುದಿಲ್ಲ” ಎಂದು ತಿಳಿಸಿದ್ದರು.

ನವೆಂಬರ್ 27, 2024ರಂದು ರನ್ಯಾ ರಾವ್ ವಿವಾಹ ನಡೆದಿತ್ತು. ಆರತಕ್ಷತೆ ಸಮಾರಂಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಪಾಲ್ಗೊಂಡಿದ್ದರು. ಕೆ. ರಾಮಚಂದ್ರ ರಾವ್ ಕುಟುಂಬದ ಜೊತೆ ಅವರು ಫೋಟೋ ತೆಗೆಸಿಕೊಂಡಿದ್ದರು.

ಕೆ. ರಾಮಚಂದ್ರ ರಾವ್ ಪುತ್ರ ರುಷಭ್ ಹಾಗೂ ಹಿರಿಯ ನಟಿ ಜಯಮಾಲ ಪುತ್ರಿ ಸೌಂದರ್ಯ ವಿವಾಹ ಫೆಬ್ರವರಿಯಲ್ಲಿ ನಡೆದಿತ್ತು. ಈ ವಿವಾಹದಲ್ಲಿಯೂ ಅನೇಕ ರಾಜಕೀಯ ನಾಯಕರು ಪಾಲ್ಗೊಂಡಿದ್ದರು. ರನ್ಯಾ ರಾವ್ ಈ ವಿವಾಹದಲ್ಲಿ ಪಾಲ್ಗೊಂಡಿದ್ದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟಿ ರನ್ಯಾ ರಾವ್ ಐಪಿಎಸ್ ಅಧಿಕಾರಿ ಪುತ್ರಿ, ಏರ್‌ಪೋರ್ಟ್‌ನಲ್ಲಿ ಅವರಿಗೆ ಇರುವ ಶಿಷ್ಟಾಚಾರದ ಮಾಹಿತಿ ತಿಳಿದೇ ದುಬೈನಿಂದ ಅವರ ಮೂಲಕ ಚಿನ್ನವನ್ನು ತರುಣ್‌ ರಾಜ್ ತರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಸೋಮವಾರ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾರ್ಚ್‌ 3ರಂದು ರನ್ಯಾ ರಾವ್ ಬಂಧಿಸಲಾಗಿತ್ತು. ಆಗ ಅವರ ಬಳಿ ಇದ್ದ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಡಿಆರ್‌ಐ ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ಮಾಡಿದ್ದರು. ಫ್ಲ್ಯಾಟ್‌ನಲ್ಲಿ 17.29 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್, ಹಣ ಜಪ್ತಿ ಮಾಡಿದ್ದರು.

News Updates

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಡ್ಯಾಪ್ಕೋ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಆರ್ ಟಿ ಇ ಎಸ್ ಕಾಲೇಜ ಪ್ರಥಮ ವಾದರೆ, ಮಹಿಳಾ ವಿಭಾಗದಲ್ಲಿ ರಾಣೇಬೆನ್ನೂರ್ ನ ಆರ್. ಆರ್ ಕಾಲೇಜು ಜಿಲ್ಲೆ ಗೆ ಪ್ರಥಮ.

News Updates

ಆರ್. ಎಸ್.ರಾಮನಗೌಡ್ರ ಸಾರಥ್ಯದಲ್ಲಿ.

ನಮ್ಮ ಹಾವೇರಿ 24X7

haveriexpress78@gmail.com
Contact: 7892724924