ಹಾವೇರಿ : ರಾಣೇಬೆನ್ನೂರ್ :ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆಗೆ ಸಹಕಾರಿಯಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು “ಸ್ತ್ರೀ ” ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನ ಜಾರಿಗೆ ತಂದಿದೆ. ಹಳ್ಳಿಯ ಆರ್ಥಿಕತೆಗೆ ‘ಸ್ತ್ರೀ’ ಶಕ್ತಿ ಮಹಿಳೆಯರು ಗುಂಪು ಕಟ್ಟಿಕೊಂಡು, ಕೂಲಿ ಮಾಡಿ, ತರಕಾರಿ ಮಾರಿ, ಮನೆಗೆಲಸ ಮಾಡಿ ಸಂಪಾದಿಸಿದ ಹಣದಲ್ಲಿ 10.20 ರೂಪಾಯಿ ಉಳಿತಾಯ ಮಾಡಿ ತಮ್ಮ ಆರ್ಥಿಕತೆಯನ್ನು ಸದೃಢಗೊಳಿಸುವ ಉದ್ದೇಶ ವನ್ನು ಒಳಗೊಂಡಿದೆ.
ಸಂಜೀವಿನಿ, ದೀನ್ ದಯಾಳ್ ಉದ್ಯೋಗ ಯೋಜನೆ, ಓ ಸಖಿ ಯೋಜನೆಗಳು ಸ್ತ್ರೀ ಸಬಲೀಕರಣ ಮತ್ತು ಕೌಶಲ್ಯ ಸೌಂರ್ಧನಿಗೆ ಕಳೆದ 10 ದಶಕಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್, ಮೈಕ್ರೋ ಫೈನಾನ್ಸ್ ಮೂಲಕ ರಾಜ್ಯ ಮತ್ತು ಜಗತ್ತಿನ ಮಟ್ಟದಲ್ಲಿ ಸ್ವಸಹಾಯ ಗುಂಪುಗಳು ವ್ಯವಹಾರ ನಡೆಸುತ್ತಿವೆ. ಗ್ರಾಮೀಣ ಭಾಗದ ಮಳೆಯರಲ್ಲಿ ಕೌಶಲ್ಯ ಸಂವರ್ಧನೆ ಬೆಳೆಸುವುದಕ್ಕಾಗಿ ಸ್ತ್ರೀ ಶಕ್ತಿ ಭವನ ಪ್ರತಿ ತಾಲೂಕು ಮಟ್ಟದಲ್ಲಿ ಅವಶ್ಯಕತೆ ಇದೆ.
ರಾಣೇಬೆನ್ನೂರ್ ಬನಶಂಕರಿ ನಗರದಲ್ಲಿ ಬನಶಂಕರಿ ಕಲ್ಯಾಣ ಮಂಟಪ ಹಿಂಭಾಗದಲ್ಲಿ ಬರುವ ಪಾರ್ಕ್ ಹತ್ತಿರ ಸುಮಾರು 3 ಗುಂಟೆ ಜಾಗದಲ್ಲಿ 7 ಲಕ್ಷಕ್ಕೂ ಹೆಚ್ಚು ಅನುದಾನದಲ್ಲಿ ಕಟ್ಟಿದ ಕಟ್ಟಡವು ಸರಿಯಾಗಿ ಬಳಕೆಯಾಗದೆ ಇರುವುದು ದುರಂತದ ಸಂಗತಿ.
ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ( SHG) ಮಹಿಳಾ ಸ್ವಾವಲಂಬಿಯಾಗಲು ಉದ್ದೇಷದಿಂದ ನಿರ್ಮಾಣವಾದ ಸ್ತ್ರೀ ಶಕ್ತಿ ಭವನ ಉಪಯೋಗಕ್ಕೆ ಬಾರದೆ ಹಾಳು ಬಿದ್ದಿರುವುದು ದುರಂತದ ಸಂಗತಿ ಇದರ ಸಂಪೂರ್ಣ ಜವಾಬ್ದಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಸ್ತ್ರೀ ಸಬಲೀಕರಣಕ್ಕಾಗಿ ಪ್ರತಿ ತಾಲೂಕಿನಲ್ಲಿ “ಸ್ತ್ರೀ ಶಕ್ತಿ ಭವನ”ಗಳನ್ನು ಸ್ಥಾಪನೆ ಮಾಡಿದೆ. ಆದರೆ ರಾಣಿಬೆನ್ನೂರು ತಾಲೂಕಿನ ಗ್ರಾಮೀಣ ಪ್ರದೇಶದ ಬಡ ಕುಟುಂಬದ ಮಹಿಳೆಯರನ್ನ ¸ಸ್ವಸಹಾಯ ಗುಂಪುಗಳಾಗಿ ರಚಿಸುವುದರ ಮೂಲಕ ಅವರ ಕುಟುಂಬಗಳನ್ನ ಬಡತನ ರೇಖೆಗಿಂತ ಮೇಲೆ ತರುವ ಉದ್ದೇಶದಿಂದ ” ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆ”NRLM ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
* ಮಹಿಳಾ ಸ್ವಸಹಾಯ ಗುಂಪುಗಳಿಗೆ ಧನಸಹಾಯ ಮಾಡುವುದು. ಕೃಷಿ,ಕರಕುಶಲತೆ, ಆಹಾರ ಸಂಸ್ಕರಣೆ, ಪ್ರೀ ಸ್ಕೂಲ್, ಬ್ಯೂಟಿಸ್, ಬುಟ್ಟಿ ತಯಾರಿಕೆ ಮೇಣದಬತ್ತಿ ತಯಾರಿಕೆ, ಉಪ್ಪಿನಕಾಯಿ ತಯಾರಿಕೆ, ಜ್ಯೂಲರಿ ಮೇಕಿಂಗ್ ಇತ್ಯಾದಿ
* ಕಡು ಬಡ ಕುಟುಂಬದ ಸದಸ್ಯರ ಸಂಘಟನೆ ಹತ್ತರಿಂದ ಇಪ್ಪತ್ತು ಜನ ಒಳಗೊಂಡ ಒಕ್ಕೂಟ ರಚನೆ ಸುತ್ತಿ ನಿಧಿ ನೀಡುವುದು.
* ಅನುಭವ ಇರುವ ಮಹಿಳೆಯರ ಮೂಲಕ ಪ್ರತಿ ತಾಲೂಕಿಗೆ 4 ತಂಡಗಳಾಗಿ ರಚನೆ ಮಾಡಿ ಪ್ರತಿ ಗ್ರಾಮ ಪಂಚಾಯಿತಿ ಮೂಲಕ 14 ದಿನಗಳ ವರೆಗೆ ಅಲ್ಲಿಯೇ ನೆಲೆಸಿ ಈಗಾಗಲೇ ಇರುವ ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡುವುದು “ಸಂಜೀವಿನಿ” ಯೋಜನೆಯ ಉದ್ದೇಶವಾಗಿದೆ.
ಇಂಥ ತರಬೇತಿಗಳನ್ನು ನೀಡಲೆಂದೇ ಪ್ರತಿ ತಾಲೂಕಿನಲ್ಲಿ ಸ್ತ್ರೀ ಶಕ್ತಿ ಭವನ ನಿರ್ಮಾಣವಾಗಿದ್ದು ಆದರೆ ರಾಣೆಬೆನ್ನೂರು ತಾಲೂಕಿನ ಸ್ತ್ರೀ ಶಕ್ತಿ ಭವನದ ಕಟ್ಟಡ ಬಳಕೆಯಾಗದೆ ಹಾಳು ಬಿದ್ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಶೇಷ ವರದಿ :ಆರ್. ಎಸ್. ರಾಮನಗೌಡ್ರ
ಸಂಪಾದಕರು :ಹಾವೇರಿ ಎಕ್ಷ ಪ್ರೆಸ್
ಕ್ರೈಂ ನ್ಯೂಸ್ ಪೇಪರ್








































